ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣ ಚಿರು ಮಗುವಿಗಾಗಿ 10 ಲಕ್ಷದ ಬೆಳ್ಳಿ ತೊಟ್ಟಿಲು ಮಾಡಿಸಿದ ಧ್ರುವ ಸರ್ಜಾ

ಅಗಲಿದ ಅಣ್ಣ ನಟ ಚಿರಂಜೀವಿ ಸರ್ಜಾ ಮಗುವಿಗಾಗಿ ಧ್ರುವ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ. 10 ಲಕ್ಷ ಬೆಲೆಬಾಳುವ ಬೆಳ್ಳಿಯ ತೊಟ್ಟಿಲನ್ನು ಮಾಡಿಸಿದ್ದು, ತೊಟ್ಟಿಲನ ಜೊತೆ ಧ್ರುವ ತೆಗೆಸಿಕೊಂಡಿರುವ ಫೋಟೋ ಸದ್ಯ ವೈರಲ್​ ಆಗುತ್ತಿದೆ.

ಹೌದು..ಅಣ್ಣನ ಮಗುವಿಗೆ ಆಗಲೇ ತೊಟ್ಟಿಲು ರೆಡಿ ಮಾಡಿಸಿದ್ದಾರೆ ಧ್ರುವ ಸರ್ಜಾ. ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಬೆಳ್ಳಿ ತೊಟ್ಟಿಲು ಇದಾಗಿದೆ. ಮಲ್ಲೇಶ್ವರಂನ ನವರತ್ನ ಜ್ಯುವೆಲೆರಿ ಅಂಗಡಿಯಲ್ಲಿ ಆರ್ಡರ್ ಕೊಟ್ಟು, ಅಣ್ಣನ ಮಗುವಿಗೆ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ ಧ್ರುವ. ಇನ್ನು, ಮುದ್ದು ಮಗು ಬರುವ ಮುನ್ನವೇ ತೊಟ್ಟಿಲಿನ ಜೊತೆಗೆ ಚಿನ್ನದ ಬಟ್ಟಲು ಕೂಡ ರೆಡಿ ಮಾಡಿಕೊಂಡಿದ್ದಾರೆ. ಚಿರು ತಾಯಿ ಅಮ್ಮಾಜಿಯವರು ಮಗುವಿಗಾಗಿ ಚಿನ್ನದ ಬಟ್ಟಲು ಖರೀದಿಸಿದ್ದಾರೆ.

ಇಂದು ಬೆಳಗ್ಗೆ ಮೇಘನಾ ಸರ್ಜಾ ಅವರೊಂದಿಗೆ ಕುಟುಂಬದವರೆಲ್ಲ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಂದೆ ಸುಂದರ್​ ರಾಜ್​ ಅವರೊಂದಿಗೆ ತೆರಳಿ ಚೆಕ್​ಅಪ್​ ಮಾಡಿಸಿಕೊಂಡು ಬಂದಿದ್ದಾರೆ. ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ, ಧ್ರುವ ಮತ್ತು ಪ್ರೇರಣಾ ಸಹ ಇದೇ ವೇಳೆ ಮೇಘನಾ ಜತೆಗಿದ್ದರು.

Edited By :
PublicNext

PublicNext

20/10/2020 04:35 pm

Cinque Terre

50.67 K

Cinque Terre

3

ಸಂಬಂಧಿತ ಸುದ್ದಿ