ಡೈನಾಮಿಕ್ ಪ್ರೀನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲಮನ್' ಚಿತ್ರ ಈಗಾಗಲೇ ಹೊಸ ಕ್ರೇಜ್ ಹುಟ್ಟಿಸಿದ್ರೇ ಇನ್ಸಪೆಕ್ಟರ್ ವಿಕ್ರಂ ಅವತಾರದಲ್ಲಿ ಖಾಕಿ ತೊಟ್ಟು ಮತ್ತೋಂದು ಮಾಸ್ ಎಂಟ್ರಿಗೆ ತಯಾರಾಗಿದ್ದು ಇದರ ನಡುವೆ ಗಾಂಧಿ ನಗರದಲ್ಲಿ ಮತ್ತೊಂದು ನ್ಯೂಸ್ ಓಡ್ತಾ ಇದೆ.
ಹೌದು ! ನಿರ್ದೇಶಕ ರಾಮ್ ನಾರಾಯಣ್ ಹಾಗೂ ಪ್ರಜ್ವಲ್ ದೇವರಾಜ್ ಕಾಂಬಿನೇಷನ್ ಹೊಸ ಚಿತ್ರಕ್ಕೆ "ಅಬ್ಬರ" ಶಿರ್ಷಿಕೆ ಅಡಿಯಲ್ಲಿ ಮತ್ತೊಂದು ಸಿನಿಮಾ ಹೊರಬರಲಿದ್ದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಂದ ಟೈಟಲ್ ಲಾಂಚ್ ಮಾಡಿಸುವ ಚಿಂತನೆಯಲ್ಲಿದ್ದಾರೆ.
ಈ ಹಿಂದೆ 'ಬಿ3' ಸಿನಿಮಾ ಸಿನಿಮಾ ನಿರ್ಮಿಸಿದ್ದ ಬಸವರಾಜ 'ಅಬ್ಬರ'ಕ್ಕೂ ಬಂಡವಾಳ ಹಾಕುತ್ತಿದ್ದು ಈ ಚಿತ್ರದಲ್ಲಿ ಮೂವರು ನಾಯಕಿಯರು ಕಾಣಿಸಿಕೊಳ್ಳಲಿದ್ದು ರಾಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ ಹಾಗೂ ಲೇಖಾಚಂದ್ರ ಚಿತ್ರಕ್ಕೆ ಪೂಜೆ ಬಣ್ಣ ಹಂಚಲೂ ಎಸ್ ಎಂದಿದ್ದಾರೆ. ಖಡಕ್ ವಿಲನ್ ಆರ್ಮುಗಮ್ ಖ್ಯಾತಿಯ ರವಿಶಂಕರ್ ಮುಖ್ಯ ಪಾಣ್ರದಲ್ಲಿ ಈ ಚಿತ್ರದಲ್ಲಿ ಅಭಿನಯಿಸಲಿದ್ದು ಇದರಲ್ಲಿ 'ವಿಲನ್' ರೋಲ್ ಮಾಡ್ತಾರಾ ಬೇರೆ ಪಾಣ್ರವಾ ಎಂಬುದನ್ನು ಚಿತ್ರ ನಿರ್ದೇಶಕರು ಬಿಟ್ಟು ಕೊಟ್ಟಿಲ್ಲ.
ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದ್ದು ಎದೆ ತೇಲಿಸುವ ಹಾಡುಗಳು ಮೋಡಿಗೆ ಬರಲಿವೆ ಸದ್ಯಕ್ಕೆ ರಾಮ್ ನಾರಾಯಣ್ ಚಿರಂಜೀವಿ ಸರ್ಜಾ ನಟನೆಯ ರಾಜಾ ಮಾರ್ತಾಂಡ ಚಿತ್ರಕ್ಕೆ ಶೂಟಿಂಗ್ ಮುಗಿಸಿರುವ ಅವರು ರಿಲೀಸ್ ತಯಾರಿ ನಡೆಸಿದ್ದಾರೆ. ಇನ್ನೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನಗೌಡ, ವೀರಂ, ಠಾಕ್ರೇ, ದಿಲ್ ಕಾ ರಾಜಾ, ಕಿಡ್ನಾಪ್, ನಾನು ನೀನು ಪ್ರೀತಿ ಚಿತ್ರಗಳು ಹೊಸ ವರ್ಷದಲ್ಲಿ ಸಾಲು ಸಾಲಾಗಿ ಅಭಿಮಾನಿಗಳಿಗೆ ರಸದೌತಣ ನೀಡಲಿವೆ.
PublicNext
20/10/2020 03:37 pm