ಬೆಂಗಳೂರು: ವರುಣನ ಮುನಿಸಿಗೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ.
ಭಾರೀ ಮಳೆಯಿಂದಾಗಿ ಸೂರು ಕಳೆದುಕೊಂಡ ಸಂಕಷ್ಟಕ್ಕೀಡಾಗಿರುವ ಜನತೆಯ ನೆರವಿಗೆ ಅಭಿನವ ಚಕ್ರವರ್ತಿ ಕಿಚ್ಚಸುದೀಪ್ ಮುಂದಾಗಿದ್ದಾರೆ.
ಮಳೆಯಿಂದಾಗಿ ಬೆಳೆಯೊಂದಿಗೆ ಸೂರು ಕಳೆದುಕೊಂಡಿರುವ ಸಂತ್ರಸ್ತರಿಗೆ ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮುಖಾಂತರ ನೆರವು ನೀಡಲಿದ್ದಾರೆ.
ನಟ ಸುದೀಪ್ ಅವರು ನೆರೆ ಸಂತ್ರಸ್ತರಿಗೆ ನೆರವು ನೀಡಲು ಸಹಾಯವಾಣಿ ತೆರೆದಿದ್ದು, ಅಗತ್ಯವಿದ್ದವರು ಆ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಲು ಸೂಚಿಸಲಾಗಿದೆ.
ಗ್ರಾಮಸ್ಥರು 6360334455 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಕಿಚ್ಚ ಚ್ಯಾರಿಟೇಬಲ್ ಸಂಸ್ಥೆಯಿಂದ ಅವರಿದ್ದಲ್ಲಿಗೆ ನೆರವಿನ ಕಿಟ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
PublicNext
17/10/2020 07:02 pm