ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನು ಸಮನಾಗಿ ಸ್ವೀಕರಿಸಬೇಕು

ಚಿತ್ರದುರ್ಗ : ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಮಾರಮ್ಮ ದೇವಿ ಹಬ್ಬದ ಪ್ರಯುಕ್ತ ಜೆ.ಟಿ ಕ್ರಿಕೆಟರ್ಸ್ ವತಿಯಿಂದ ಪ್ರಪ್ರಥಮ ಬಾರಿಗೆ ಅಂಡರ್ ೧೯ ಕ್ರಿಕೆಟ್ ಟೂರ್ನಮೆಂಟನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಮಾಡಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ರವಿಕುಮಾರ್ ನಾಯ್ಕ್ ಪ್ರತಿಯೊಂದು ಹಳ್ಳಿಯ ಯುವಕರು ಹಾಗೂ ಪ್ರತಿಭೆಗಳು ನೂತನವಾಗಿ ಬೆಳೆಬೇಕು ಪ್ರತಿಭೆ ಅನ್ನೋದು ಕೇವಲ ಹಳ್ಳಿಗೆ ಸೀಮಿತವಾಗಿಲ್ಲದೆ ರಾಜ್ಯ ದೇಶಗಳಲ್ಲೂ ಗುರುತಿಸಿಕೊಳ್ಳಲಿ ಯಾವುದೇ ಸಹಕಾರ ಇದ್ರೂ ನಮ್ಮ ಸಂಘಟನೆಯಿಂದ ಮಾಡುತ್ತೇವೆ ರಾಜ್ಯಕ್ಕೆ ಹಾಗೂ ನಮ್ಮ ದೇಶಕ್ಕೆ ಕ್ರಿಕೆಟ್ ಆಟಗಾರರು ಇನ್ನು ಹೆಚ್ಚಿನ ಪ್ರತಿಭೆಗಳು ಈ ದೇಶದಲ್ಲಿ ಹುಟ್ಟಿಕೊಳ್ಳಲಿ ಎಂದು ಯುವಕರಿಗೆ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

05/10/2024 05:32 pm

Cinque Terre

1.56 K

Cinque Terre

0