ಮೊಳಕಾಲ್ಮುರು: ತಾಲ್ಲೂಕಿನ ಕಳೆದ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಕೆರೆ ಕಟ್ಟೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿವೆ.
ಭಾರಿ ಮಳೆಯಿಂದಾಗಿ ಚಿಕ್ಕೋಬನಹಳ್ಳಿ ಬಳಿ ಇರುವ ಕಮ್ ಬ್ಯಾರೇಜ್‌ಗಳು ಮೈದುಂಬಿ ಹರಿಯುತ್ತಿದ್ದು ರಂಗಯ್ಯನ ದುರ್ಗ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿವೆ. ತಾಲೂಕಿನಲ್ಲಿ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಪಕ್ಕುರ್ತಿ ಕೆರೆಯು ಕೋಡಿ ಬಿದ್ದಿದ್ದು ಈ ಭಾಗದ ರೈತರಿಗೆ ಇನ್ನಿಲ್ಲದ ಸಂತಸ ಉಂಟು ಮಾಡಿದೆ. ಇನ್ನು ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತುಪ್ಪದಕ್ಕನಹಳ್ಳಿಕೆರೆ,ದೇವಸಮುದ್ರ ಕೆರೆ, ಅಮುಕುಂದಿ ಕೆರೆ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ಕಳೆದ ರಾತ್ರಿ ತಾಲೂಕು ವ್ಯಾಪ್ತಿಯಲ್ಲಿ ಸುರಿದ ಮಳೆಯ ವಿವರ ಇಂತಿದೆ.
ಮೊಳಕಾಲ್ಮುರು ವ್ಯಾಪ್ತಿಯಲ್ಲಿ 72.6, ರಾಯಾಪುರ 62.0 ಮತ್ತು
ಬಿಜಿಕೆರೆ 34.4 ರಾಂಪುರ ವ್ಯಾಪ್ತಿಯಲ್ಲಿ 70.1 ದೇವಸಮುದ್ರ ವ್ಯಾಪ್ತಿಯಲ್ಲಿ 89.3 ಅಧಿಕ ಮಳೆಯಾಗಿದೆ ಎಂದು ತಾಲೂಕು ಆಡಳಿತ ವರದಿ ತಿಳಿಸಿದೆ. ಒಟ್ಟಿನಲ್ಲಿ ಮಳೆ ಇಲ್ಲದೇ ಕಂಗಾಲಾಗಿದ್ದ ರೈತರಿಗೆ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರೈತರು ಫುಲ್ ಖುಷಿಯಾಗಿದ್ದಾರೆ.
ವರದಿ: ಎಚ್. ಮಹಾಂತೇಶ್ ರಾಯಾಪುರ
PublicNext
05/10/2024 12:29 pm