ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯೂರು: ಸಚಿವರನ್ನು ಕಾಣಲು ಬಂದು ವಾಪಸ್ ಆದ ವಿದ್ಯಾರ್ಥಿನಿಯರು..

ಹಿರಿಯೂರು: ಶಾಲಾ-ಕಾಲೇಜಿಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ಬಾರದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿನಿಯರ ಗುಂಪೊಂದು ಸಚಿವ ಡಿ. ಸುಧಾಕರ್ ಅವರ ನಿವಾಸಕ್ಕೆ ತೆರಳಿತು.

ಆದರೆ ಅವರು ಮನೆಯಲ್ಲಿ ಲಭ್ಯರಿಲ್ಲದ ಕಾರಣ, ವಿದ್ಯಾರ್ಥಿನಿಯರು ವಾಪಸಾದರು. ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪದ ಓಬಳಾಪುರ ಹಾಗೂ ಗಾಯತ್ರಿಪುರ ಗ್ರಾಮದ ಹತ್ತಾರು ವಿದ್ಯಾರ್ಥಿನಿಯರು ಇಲ್ಲಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ನಿಯಂತ್ರಣಾಧಿಕಾರಿಯನ್ನು ಭೇಟಿಯಾಗಿ ಬಸ್ ಸೌಲಭ್ಯದ ಬಗ್ಗೆ ಪ್ರಶ್ನಿಸಿದರು ಆದರೆ ಅವರ ಉತ್ತರದಿಂದ ಬೇಸರಗೊಂಡ ವಿದ್ಯಾರ್ಥಿನಿಯರು ಇದನ್ನು ಸಚಿವರ ಗಮನಕ್ಕೆ ತರಲು ನಿರ್ಧರಿಸಿ, ಅವರ ಮನೆಗೆ ತೆರಳಿದರು. ಸಚಿವರು ಬೆಳಗಾವಿ ಅಧಿವೇಶನದಲ್ಲಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. .

Edited By : PublicNext Desk
Kshetra Samachara

Kshetra Samachara

18/12/2024 11:47 am

Cinque Terre

860

Cinque Terre

0