ಚಳ್ಳಕೆರೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ, ಚೆಕ್ ಡ್ಯಾಮ್‌ಗಳು ಮೈ ತುಂಬಿ ಹರಿಯುತ್ತಿವೆ. ಇದು ರೈತರಲ್ಲಿ ಮಂದಹಾಸ ಮೂಡಿಸಿದೆ.
ಬಡವರ ಬಾದಾಮಿ ಶೇಂಗಾ ಬೆಳೆ ಮಳೆಯಿಲ್ಲದೆ ಒಣಗಲು ಪ್ರಾರಂಭಿಸಿದ್ದವು. ಈಗ ಸಾಯುವ ಶೇಂಗಾ ಬೆಳೆಗೆ ಗ್ಲುಕೋಸ್ ಬಾಟಲಿ ಹಾಕಿದಂತಾಗಿದೆ. ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿದಂತಾಗುತ್ತದೆ .
ಉತ್ತಮ ಮಳೆಯಿಂದ ಚಳ್ಳಕೆರೆ ಸೇರಿದಂತೆ ಗಂಜಿಗುಂಟೆ. ಗೋಪನಹಳ್ಳಿ ಗರಣಿಹಳ್ಳ ಮೈತುಂಬಿ ಹರಿದು ದೊಡ್ಡೇರಿ ಹಾಗೂ ರಾಣಿಕೆರೆಯತ್ತ ನೀರು ಸರಾಗವಾಗಿ ಹರಿಯುತ್ತಿದೆ.
PublicNext
05/10/2024 12:01 pm