ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚಿತ್ರದುರ್ಗ ತಾಲ್ಲೂಕಿನ ಮೇಗಳಹಳ್ಳಿ ಗ್ರಾಮದಲ್ಲಿ ಮನೆಯೊಂದು ಕುಸಿದಿದೆ. ಹುಚ್ಚೇನಹಳ್ಳಿ ರಾಮಪ್ಪ ಎಂಬುವವರ ಮನೆ ಕುಸಿದಿದ್ದು, ಮನೆ ಬೀಳುವ ವೇಳೆ ಎಚ್ಚೆತ್ತುಕೊಂಡು ಮನೆಯ ಸದಸ್ಯರು ಹೊರ ಬಂದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಕಳೆದ ಎರಡು ದಿನಗಳ ಹಿಂದೆ ರಾತ್ರಿ ಭಾರೀ ಮಳೆ ಬಂದಿದ್ದು ಮಳೆಗೆ ಮನೆ ಬೀಳುವ ಹಂತ ತಲುಪಿತ್ತು. ನಿನ್ನೆ ರಾತ್ರಿಯ ವೇಳೆ ಮನೆಯ ಮೇಲ್ಛಾವಣಿಯ ಶೀಟ್ ಅಲುಗಾಡಿದ್ದು ಎಚ್ಚೆತ್ತ ಮನೆಯ ಸದಸ್ಯರು ಎದ್ದು ಹೊರ ಬಂದಿದ್ದಾರೆ. ನಂತರ ಮನೆ ಸಂಪೂರ್ಣ ನೆಲಕ್ಕುರುಳಿದೆ. ಸದ್ಯ ಈ ಮನೆಯವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಇನ್ನೂ ಈ ಮನೆ ಸುಮಾರು 15 ವರ್ಷ ಹಳೆಯದಾಗಿದ್ದು, ಮನೆ ಕುಸಿತದಿಂದಾಗಿ ಮನೆಯ ಸಾಮಗ್ರಿಗಳು ಸಂಪೂರ್ಣ ನಾಶವಾಗಿವೆ. ಇದರಿಂದಾಗಿ ಮನೆ ಮಾಲೀಕರು ಸಂಕಷ್ಟ ಎದುರಿಸಿದ್ದು ಸಂಬಂಧ ಪಟ್ಟ ಇಲಾಖೆ ಅಥವಾ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಕುಟುಂಬಸ್ಥರು ಅಗ್ರಹಿಸಿದ್ದಾರೆ.
PublicNext
04/10/2022 06:08 pm