ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಧಿಕ ಮಳೆಯ ಕಾಟದಿಂದ ಆಲೂಗಡ್ಡೆ ತೋಟವನ್ನು ರೈತ ನಾಶಮಾಡಿದ್ದಾನೆ.ಅಧಿಕ ನೀರಿನಿಂದ ಬೆಳವಣಿಗೆ ಫಸಲು ಕಾಣಲಿಲ್ಲ.ಹೀಗಾಗಿ ಬೇಸತ್ತ ರೈತ ತೋಟ ನಾಶ ಮಾಡಿದ್ದಾನೆ. ಇನ್ನು ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಯಲುವಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹೀರೆಗೌಡನಿಗೆ ಸೇರಿದ ಒಂದು ಎಕರೆ ಆಲೂಗಡ್ಡೆ ತೋಟವನ್ನ ಸ್ವತಃ ರೈತನೇ ನಾಶ ಮಾಡಿದಾನೆ.
ಅಧಿಕ ನೀರಿನಿಂದ ಗಿಡಗಳು ಬೆಳವಣಿಗೆಯಾಗದಿರುವುದರಿಂದ ತೋಟನಾಶವಾಗಿದೆ.ಇನ್ನು ರೈತನ್ನ ಕುಟುಂಬ ಈಗ ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದೆ.
Kshetra Samachara
15/09/2022 11:44 am