ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಒತ್ತುವರಿ ತೆರವು ಕಾರ್ಯಾಚರಣೆ, ಜೆಸಿಬಿಗಳ ಆರ್ಭಟ!

ಚಿಕ್ಕಬಳ್ಳಾಪುರ : ಚಿಂತಾಮಣಿ ನಗರದ ಮುಖ್ಯ ರಸ್ತೆಗಳು ಮತ್ತು ಪಾದಚಾರಿ ರಸ್ತೆಗಳ ಒತ್ತುವರಿ ತೆರವಿಗೆ ಒಂದು ದಶಕದ ನಂತರ ನಗರಸಭೆ ಮುಂದಾಗಿ ಯಶಸ್ವಿ ಕಂಡಿದ್ದು, ಇಂದು ನಗರದ ಅತ್ಯಂತ ಜನನಿಬಿಡ ಮತ್ತು ವಾಹನ ದಟ್ಟಣೆ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿ 234 ರಸ್ತೆಯ ಎಂ.ಜಿ.ರಸ್ತೆಯಲ್ಲಿ ಒತ್ತುವರಿಯನ್ನು ಸೂಕ್ತ ಪೊಲೀಸ್ ಬಂದೋ ಬಸ್ತ್ನಲ್ಲಿ ಹೆದ್ದಾರಿ ಅಧಿಕಾರಿಗಳು ಮತ್ತು ನಗರಸಭೆಯ ಅಧಿಕಾರಿಗಳು ಜಂಟಿ ಕಾಯಾಚರಣೆ ನಡೆಸಿ ತೆರವುಗೊಳಿಸಿದರು.

ರಾಷ್ಟ್ರೀಯ ಹೆದ್ದಾರಿ 234 ರಸ್ತೆಯ ಒತ್ತುವರಿ ತೆರವಿಗೆ ಅಂಗಡಿ ಮಾಲೀಕರಿಗೆ ಗಡುವು ನಿಗಧಿಪಡಿಸಿದ ಬೆನ್ನಲ್ಲೇ ನಗರದಲ್ಲಿ ಮೂರನೇ ಹಂತದ ತೆರವು ಕಾರ್ಯಾಚರಣೆಯನ್ನು ನಗರದ ಎಂ.ಜಿ. ರಸ್ತೆಯ ಬಾಗೇಪಲ್ಲಿ ವೃತ್ತದಿಂದ ಬುಧವಾರದಂದು ಮೂರು ಜೆಸಿಬಿಗಳು ತೆರವು ಕಾರ್ಯಾಚರಣೆಗೆ ಇಳಿದರೆ, ತೆರವು ಮಾಡಿದ ಸಾಮಗ್ರಿಗಳನ್ನು ನಗರಸಭೆಯ ವಾಹನಗಳು ಎತ್ತಂಗಡಿ ಮಾಡುವ ಕೆಲಸಕ್ಕೆ ಟ್ರ್ಯಾಕ್ಟರ್‌ಗಳು ಸಹ ಬುಧವಾರ ಕಾರ್ಯಾಚರಣೆಗೆ ಇಳಿದವು.

ಸುಗಮ ಸಂಚಾರಕ್ಕೆ ಬಹುತೇಕ ಅಂಗಡಿ ಮಾಲೀಕರು ಮುಖ್ಯ ರಸ್ತೆಯ ಮತ್ತು ಫುಟ್‌ ಪಾತ್ ಒತ್ತುವರಿಯೇ ಸಮಸ್ಯೆಯಾಗಿರುವುದರಿಂದ ಒತ್ತುವರಿ ತೆರವಿಗೆ ನಗರಸಭೆ ಮುಂದಾಗಿದ್ದು ಎರಡು ಹಂತದಲ್ಲಿ ತೆರವು ಕಾರ್ಯಾಚರಣೆಯನ್ನು ನಗರಸಭೆಯ ಪೌರಾಯುಕ್ತ ಜಿ.ಎನ್.ಛಲಪತಿ ನೇತೃತ್ವದಲ್ಲಿ ಪೂರ್ಣಗೊಳಿಸಿದ್ದರು.

ಇಂದು ಮೂರನೇ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಎಇಇ ಮಲ್ಲಿಕಾರ್ಜುನ್ ಮಲಿಕೆರೆ ಮತ್ತು ನಗರ ಸಭೆಯ ಪೌರಾಯುಕ್ತ ಜಿ.ಎನ್.ಚಲಪತಿ, ಜಿಲ್ಲಾ ರಕ್ಷಣಾಧಿಕಾರಿ ಕುಶಲ್ ಚೌಕ್ಸೆ ನೇತೃತ್ವದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಎಂ.ಜಿ. ರಸ್ತೆಯಲ್ಲಿ ಒತ್ತುವರಿ ತೆರವಿಗೆ ಮುಂದಾದರು.

Edited By : Vinayak Patil
PublicNext

PublicNext

23/01/2025 12:38 pm

Cinque Terre

37.35 K

Cinque Terre

0