", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1738317832-7.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿ ಚಾಂಡ್ರಹಳ್ಳಿ ಗ್ರಾಮದಲ್ಲಿ ಕಾಲುದಾರಿ ಒತ್ತುವರಿ ಸರ್ವೆ ಕಾರ್ಯವನ್ನು ಪೊಲೀಸರ ನೇತೃ...Read more" } ", "keywords": "Chikkaballapur, Survey, Land Owners, Dispute, Karnataka News, Land Acquisition, Chikkaballapur District, Revenue Department, Survey Controversy, Land Dispute Resolution.,Infrastructure", "url": "https://publicnext.com/node" } ಚಿಕ್ಕಬಳ್ಳಾಪುರ: ಕಾಲುದಾರಿ ಸರ್ವೆ- ಜಮೀನು ಮಾಲೀಕರ ನಡುವೆ ಮಾತಿನ ಚಕಮಕಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಕಾಲುದಾರಿ ಸರ್ವೆ- ಜಮೀನು ಮಾಲೀಕರ ನಡುವೆ ಮಾತಿನ ಚಕಮಕಿ

ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿ ಚಾಂಡ್ರಹಳ್ಳಿ ಗ್ರಾಮದಲ್ಲಿ ಕಾಲುದಾರಿ ಒತ್ತುವರಿ ಸರ್ವೆ ಕಾರ್ಯವನ್ನು ಪೊಲೀಸರ ನೇತೃತ್ವದಲ್ಲಿ ನಡೆಸಲಾಯಿತು.

ಗ್ರಾಮದ ರೈತ ವಿಶ್ವನಾಥ್ ಚಾರಿ ಕಾಲುದಾರಿಗಾಗಿ ಅರ್ಜಿ ಸಲ್ಲಿಸಿದ್ದು, ತಾಲೂಕು ತಾಹಶೀಲ್ದಾರ್ ಅರ್ಜಿ ಪರಿಶೀಲನೆ ನಡೆಸಿ ಸರ್ವೆಗಾಗಿ ಸೂಚಿಸಿದ್ದರು.ಅದರಂತೆ ಇಂದು ಭೂಮಾಪನ ಇಲಾಖೆಯ ಅಧಿಕಾರಿ ಖಾದರ್ ಸಾಬ್,ರಾಜಸ್ವ ನಿರೀಕ್ಷರು ನರಸಿಂಹಮೂರ್ತಿ ಹಾಗೂ ಗ್ರಾಮಾಡಳಿತ ಅಧಿಕಾರಿ ತಸ್ಲೀಮ್ ಭಾಗಿಯಾಗಿ ಸರ್ವೆ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ.

ಚಾಂಡ್ರಹಳ್ಳಿ ಗ್ರಾಮದ ಸರ್ವೆ ನಂ122 ರಲ್ಲಿ ಲಕ್ಷ್ಮಿದೇವನಕೋಟೆಗೆ ಹಾದು ಹೋಗುವ ಕಾಲು ದಾರಿ ಇದ್ದು ಕೆಲವರು ಒತ್ತುವರಿ ಮಾಡಿಕೊಂಡಿದ್ದು ರೈತರಾದ ವೀರಭದ್ರಚಾರಿ ಬಿನ್ ಅಕ್ಕಯ್ಯಮ್ಮ ಎಂಬುವವರು ತಾಲೂಕು ದಂಡಾಧಿಕಾರಿಗಳಿಗೆ ಸರ್ವೆ ನಡೆಸಿ ಒತ್ತುವರಿ ತೆರವು ಗೊಳಿಸುವಂತೆ ಅರ್ಜಿ ಸಲ್ಲಿಸಿದ್ದು ಅದರಂತೆ ಇಂದು ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಕಾರ್ಯ ನಡೆಸಿ ಕಾಲುದಾರಿ ಗುರುತಿಸಿಕೊಟ್ಟು ಮುಂದಿನ ಕ್ರಮಕ್ಕಾಗಿ ತಾಲೂಕು ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಸರ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸರ್ವೆ ನಂ122 ರಲ್ಲಿ ಜಮೀನು ಇದ್ದು ಗ್ರಾಮದ ಕೆಲವರು ಕಾಲು ದಾರಿ ಒತ್ತುವರಿ ಮಾಡಿಕೊಂಡಿದ್ದು ಅದರಂತೆ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಇಂದು ಸರ್ವೆ ಅಧಿಕಾರಿಗಳು ದಾರಿ ಗುರುತಿಸಿಕೊಟ್ಟಿದ್ದಾರೆ.ಈ ಕಾಲುದಾರಿಗಾಗಿ ಕಳೆದ 2 ವರ್ಷ ಗಳಿಂದ ರಸ್ತೆಗಳಿಗಾಗಿ ಓಡಾಟ ನಡೆಸಲಾಗಿತ್ತು ಎಂದು ರೈತ ಹೇಳಿಕೆ ಕೊಟ್ಟಿದ್ದಾರೆ.

ಇನ್ನೂ ದಾರಿಯಲ್ಲಿ ಸರ್ವೆ ಕಾರ್ಯ ನಡೆಸುವ ವೇಳೆ ಜಮೀನು ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿದ್ದು ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ನಿಭಾಯಿಸಿ ಅಧಿಕಾರಿಗಳಿಗೆ ಸರ್ವೆ ಮಾಡಿಸಿ ಕೊಡಲು ಅನುವು ಮಾಡಿಕೊಡಲಾಗಿದೆ.

Edited By : Somashekar
PublicNext

PublicNext

31/01/2025 03:33 pm

Cinque Terre

26.08 K

Cinque Terre

0