ಚಿಕ್ಕಬಳ್ಳಾಪುರ : ಶಕ್ತಿ ಯೋಜನೆ ಎಫೆಕ್ಟ್ ನಿಂದ ಸಾರ್ವಜನಿಕರಿಗೆ ಬಸ್ ಇಲ್ಲದೆ ಇಂದು ಬಸ್ ನಿಲ್ಲಿಸಿ ಗಲಾಟೆ ನಡೆಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಚೌಡಸಂದ್ರ ಗೇಟ್ ಸಮೀಪ ಬಸ್ ನಿಲ್ಲಿಸಿದ ಸಾರ್ವಜನಿಕರು, ಚಾಲಕ ಹಾಗೂ ನಿರ್ವಾಹಕನ ಮೇಲೆ ಹರಿಹಾಯ್ದರು. ಸುಮಾರು 3 ಗಂಟೆ ಕಾದರೂ ಬಸ್ ನಿಲ್ಲಿಸದ ಹಿನ್ನಲೆಯಲ್ಲಿ ಸಾರ್ವಜನಿಕರು ಗಲಾಟೆ ಮಾಡಿದರು.
ಸಾರ್ವಜನಿಕರು ಬಸ್ ನಿಲ್ಲಿಸಿದರೆ ಇದು ಎಕ್ಸ್ ಪ್ರೆಸ್ ಬಸ್ ಎಂದು ಹೋಗುತ್ತಿದ್ದರು ಎಂದು ಸಾರ್ವಜನಿಕರು ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆದು ಪ್ರತಿಭಟಿಸಿದರು.
ಸಾರ್ವಜನಿಕರು ರಸ್ತೆಯಲ್ಲಿ ಬೈಕ್ ಅಡ್ಡ ಹಾಕಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ವಿರುದ್ಧ ಗಲಾಟೆ ನಡೆಸಿದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನಂತರ ಬೈಕ್ ತೆಗೆದು, ಬಸ್ ಪ್ರಯಾಣಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಅನುಕೂಲ ಮಾಡಿಕೊಟ್ಟರು.
PublicNext
18/01/2025 10:07 pm