ಕಳ್ಳತನ ಆರೋಪದ ಮೇಲೆ 11 ವರ್ಷದ ದಲಿತ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಆರೋಪ ಚಿಂತಾಮಣಿ ತಾಲ್ಲೂಕಿನ ಕೆಂಪದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳ್ಳತನ ಆರೋಪದ ಮೇಲೆ 11 ವರ್ಷದ ದಲಿತ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಆರೋಪ ಚಿಂತಾಮಣಿ ತಾಲ್ಲೂಕಿನ ಕೆಂಪದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸವರ್ಣಿಯ ನಾಗರಾಜ್ ಎಂಬುವರ ಮಗಳ ಕಿವಿ ಓಲೆಯನ್ನು ಬಾಲಕ ಕದ್ದಿದ್ದಾನೆಂದು ಆರೋಪಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಗ್ರಾಮದಲ್ಲಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆಂದು ಬಾಲಕ ಆರೋಪಿಸಿದ್ದಾನೆ.
ಮಗನ ರಕ್ಷಣೆಗೆ ಹೋದ ಆತನ ತಾಯಿಗೂ ಹಲ್ಲೆ ಮಾಡಿರುವ ದೂರು ಕೇಳಿ ಬಂದಿದೆ. ಬಾಲಕ ಹಾಗೂ ಆತನ ತಾಯಿ ಚಿಂತಾಮಣಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕಾರಣ ದಾಖಲಾಗಿದೆ. ಕೆಂಪದೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ, ನವೀನ, ನಂಜೇಗೌಡ, ಹರೀಶ, ನಾಗರಾಜ್ ಸೇರಿದಂತೆ ಹಲವರು ವಿರುದ್ದ ಪ್ರಕರಣ ದಾಖಲಾಗಿದೆ.
PublicNext
01/10/2022 01:06 pm