ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯದಶಮಿ ಹಿನ್ನೆಲೆ : ಮಲೆ ಮಹದೇಶ್ಚರಬೆಟ್ಟದ ಮಾದಪ್ಪನ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ

ಚಾಮರಾಜನಗರ : ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ವಿಜಯ ದಶಮಿ ಹಾಗೂ ದಸರಾ ಮಹೋತ್ಸವದ ಅಂಗವಾಗಿ ಪವಾಡ ಪುರುಷ ಮಾದಪ್ಪನಿಗೆ ವಿಶೇಷ ಪೂಜೆ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ದೇವಸ್ಥಾನ ಮುಂಭಾಗ ಹಾಗೂ ರಂಗಮಂದಿರ ವಿವಿಧೆಡೆ ಬಿಡಾರ ಹೂಡಿದ್ದ ಭಕ್ತರು ಮಾದಪ್ಪನ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು. ಮಾದಪ್ಪನಿಗೆ ಉಘೇ ಮಾದಪ್ಪ, ಉಘೇ ಮಾದಪ್ಪ, ಎಂಬ ಜೈಕಾರಗಳನ್ನು ಹಾಕುತ್ತಾ ಮಹದೇಶ್ವರನನ್ನು ಸ್ಮರಿಸುತ್ತಿದ್ದರು.

ಮಾದಪ್ಪನಿಗೆ ಬೆಳಗ್ಗೆಯಿಂದಲೇ ಎಣ್ಣೆ ಮಜ್ಜನ, ತೈಲಾಭಿಷೇಕ, ಲಕ್ಷ ಬಿಲ್ವಾರ್ಚನೆ ವಿಶೇಷ ಪೂಜೆ ವಿಧಿವಿಧಾನಗಳೊಂದಿಗೆ ಜರುಗಿದವು. ಹರಕೆ ಹೊತ್ತ ಭಕ್ತರು ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಹದೇಶ್ವರನಿಗೆ ಹರಕೆ ಕಾಣಿಕೆ ಸಲ್ಲಿಸಿದರು. ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಕಾಲ್ನಡಿಗೆಯಲ್ಲಿ ಹಾಗೂ ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದು ಪುನೀತರಾದರು.

ಆಯುಧ ಪೂಜೆಯಂದು ಮಾದಪ್ಪನ‌ ಸನ್ನಿಧಾನದಲ್ಲಿ ರುವ ವೀರಭದ್ರೇಶ್ವರನಿಗೆ ಮೈಸೂರು ಮಹಾರಾಜರು ನೀಡಲಾಗಿದ್ದ ಚಿನ್ನಾಭರಣಗಳಿಂದ ಅಲಂಕಾರ ಮಾ ಡಲಾಗಿತ್ತು. ವಿಜಯದಶಮಿಯಂದು ಮಾದಪ್ಪನಿಗೆ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಈ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ. 

ವಿಜಯದಶಮಿಯ ದಿನವಾದ ಶನಿವಾರ ಕುದುರೆ ವಾಹನೋತ್ಸವ ನಡೆಯಿತು. ಈ ವಾಹನೋತ್ಸವದಲ್ಲಿ ಮಾದಪ್ಪನ ಮೂರ್ತಿಯನ್ನು ಇರಿಸಿ ದೇಗುಲದ ಸುತ್ತ ಲು ಮೆರವಣಿಗೆ ಮಾಡುವ ಜತೆಗೆ ಬಲಮುರಿ ಗಣಪ ತಿ ದೇಗುಲದ ಬಳಿ ಇರುವ ಬನ್ನಿಮರಕ್ಕೆ ಪೂಜೆ ಸಲ್ಲಿ ಸಿ, ವಿಶೇಷ ಅಭಿಷೇಕ ಪೂಜಾಕಾರ್ಯಗಳನ್ನು ನೆರ ವೇರಿಸಲಾಯಿತು. ಬಳಿಕ ಮೆರವಣಿಗೆ ಮಾದಪ್ಪನ ಮೂಲ ಸ್ಥಾನ ತಲುಪಿತು.

Edited By : PublicNext Desk
Kshetra Samachara

Kshetra Samachara

12/10/2024 04:47 pm

Cinque Terre

8.54 K

Cinque Terre

0