ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸಿಸಿ, ಅಂಬುಜಾ ಸಿಮೆಂಟ್ಸ್‌ನ 1.04 ಲಕ್ಷ ಕೋಟಿ ರೂ. ಮೊತ್ತದ ಷೇರುಗಳನ್ನು ಅಡವಿಟ್ಟ ಅದಾನಿ!

ಅಂಬುಜಾ ಸಿಮೆಂಟ್ಸ್‌ ಹಾಗೂ ಎಸಿಸಿ ಲಿ.ನ್ನು ಸ್ವಾಧೀನಪಡಿಸಿಕೊಂಡ ಕೇವಲ ಎರಡು ದಿನಗಳಲ್ಲೇ ಬಿಲಿಯನೇರ್ ಗೌತಮ್ ಅದಾನಿ ಈ ಕಂಪನಿಗಳ ಬರೋಬ್ಬರಿ 13 ಬಿಲಿಯನ್‌ ಡಾಲರ್ (1.04 ಲಕ್ಷ ಕೋಟಿ ರೂ.) ಮೌಲ್ಯದ ಷೇರುಗಳನ್ನು ಅಡ ಇಟ್ಟಿದ್ದಾರೆ. ಇದು ಅದಾನಿ ಗ್ರೂಪ್‌ನ ಬಂಡವಾಳದ ಹಸಿವನ್ನು ಪ್ರತಿಬಿಂಬಿಸುತ್ತದೆ.

ಎರಡು ಕಂಪನಿಗಳಲ್ಲಿನ ಷೇರುಗಳನ್ನು 'ಕೆಲವು ಸಾಲದಾತರು ಮತ್ತು ಇತರ ಹಣಕಾಸು ಪಕ್ಷಗಳ ಲಾಭಕ್ಕಾಗಿ,' ಪಡೆದುಕೊಳ್ಳಲಾಗಿದೆ ಎಂದು ಭಾರತೀಯ ಷೇರು ಮಾರುಕಟ್ಟೆಗೆ ಸಲ್ಲಿಸಿದ ಪ್ರತ್ಯೇಕ ಫೈಲಿಂಗ್‌ಗಳಲ್ಲಿ ಡಾಯ್ಚ್‌ ಬ್ಯಾಂಕ್ ಎಜಿಯ ಹಾಂಗ್‌ಕಾಂಗ್ ಶಾಖೆ ತಿಳಿಸಿದೆ. ಎಸಿಸಿ ಲಿ.ನ ಶೇ.57ರಷ್ಟು ಹಾಗೂ ಅಂಬುಜಾ ಸಿಮೆಂಟ್ಸ್‌ನ ಶೇ. 63ರಷ್ಟು ಷೇರುಗಳನ್ನು ಭದ್ರತಾ ರೂಪದಲ್ಲಿ ಬ್ಯಾಂಕು ಪಡೆದುಕೊಂಡಿವೆ.

ಈ ವಹಿವಾಟನ್ನು ವಾಣಿಜ್ಯ ಪರಿಭಾಷೆಯಲ್ಲಿ ನಾನ್‌ ಡಿಸ್ಪೋಸಲ್‌ ಅಂಡರ್‌ಟೇಕಿಂಗ್‌ ಎನ್ನಲಾಗುತ್ತದೆ. ಅಂದರೆ ಸಾಲವನ್ನು ಮರುಪಾವತಿ ಮಾಡುವವರೆಗೆ ಷೇರುಗಳನ್ನು ಮಾರಾಟ ಮಾಡಲಾಗುವುದಿಲ್ಲ. ಹಸಿರು ಶಕ್ತಿಯಿಂದ ಮಾಧ್ಯಮದವರೆಗೆ ಹೊಸ ಹೊಸ ವಲಯಗಳಿಗೆ ಕಾಲಿಡುತ್ತಿರುವ ಅದಾನಿ ಗ್ರೂಪ್‌ನ ಸಾಲದ ಪ್ರಮಾಣ ಮಿತಿ ಮೀರುತ್ತಿದೆ ಎಂಬ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಸಂಘಟಿತ ಸಂಸ್ಥೆಯು ತನ್ನ ಪಟ್ಟಿ ಮಾಡಲ್ಪಟ್ಟ ಕಂಪನಿಗಳಲ್ಲಿ ಕೆಲವು ಕಂಪನಿಗಳ ಸಾಲವನ್ನು ಇಳಿಕೆ ಮಾಡಲು ಯತ್ನಿಸುತ್ತಿದ್ದರೆ, ಕೆಲವು ಕಂಪನಿಗಳಲ್ಲಿ ಮಾತ್ರ ಸಾಲ ಹೆಚ್ಚುತ್ತಲೇ ಇದೆ. ಈ ವರ್ಷದ ಆರಂಭದಲ್ಲಿ ಹೋಲ್ಸಿಮ್‌ ಗ್ರೂಪ್‌ನಿಂದ ಅಂಬುಜಾ ಸಿಮೆಂಟ್ಸ್‌ ಮತ್ತು ಎಸಿಸಿ ಲಿ.ನ್ನು ಖರೀದಿಸಲು ಅದಾನಿ ತೀರ್ಮಾನಿಸಿತ್ತು. ಕೆಲ ದಿನಗಳ ಹಿಂದೆ ಈ ವ್ಯವಹಾರ ಪೂರ್ಣಗೊಂಡಿದ್ದು, ಕಂಪನಿಯ ವಾರ್ಷಿಕ ಸಾಮರ್ಥ್ಯವನ್ನು 2027ರ ವೇಳೆಗೆ ದ್ವಿಗುಣಗೊಳಿಸಲು ಕಂಪನಿ ಯೋಜನೆ ರೂಪಿಸಿದೆ.

ಈ ಸ್ವಾಧೀನಗಳು ಅದಾನಿ ಗ್ರೂಪ್‌ಗೆ ಸುಮಾರು 1.10 ಶತಕೋಟಿ ರೂಪಾಯಿ (1.4 ಬಿಲಿಯನ್‌ ಡಾಲರ್‌) ನಗದನ್ನು ಪಡೆಯಲು ಅವಕಾಶ ನೀಡುತ್ತವೆ ಎಂದು ಈ ಹಿಂದೆ ಜೆಫರೀಸ್ ಫೈನಾನ್ಶಿಯಲ್ ಗ್ರೂಪ್ ಇಂಕ್ ಹೇಳಿತ್ತು. ಸೋಮವಾರದ ಮುಕ್ತಾಯದ ಆಧಾರದ ಮೇಲೆ, ಎಸಿಸಿ ಮತ್ತು ಅಂಬುಜಾದಲ್ಲಿನ ಅಡ ಇಟ್ಟ ಷೇರುಗಳ ಮೌಲ್ಯ 13 ಬಿಲಿಯನ್‌ ಡಾಲರ್‌ಗಳಾಗಿವೆ.

ಅದಾನಿ ಸಮೂಹ ಸಿಮೆಂಟ್‌ನತ್ತ ಸಾಗುತ್ತಿರುವುದು ಮತ್ತು ಇತ್ತೀಚಿನ ದಿನಗಳಲ್ಲಿ ಸರಕುಗಳ ಬೆಲೆ ಇಳಿಕೆಯಾಗಿರುವುದರಿಂದ

ಭಾರತದಲ್ಲಿ ಸಿಮೆಂಟ್ ಕಂಪನಿಗಳ ಷೇರುಗಳು ಒಂದೇ ಸಮನೆ ಏರಿಕೆಯಾಗುತ್ತಿವೆ. ಮೇ ತಿಂಗಳಲ್ಲಿ ಹೋಲ್ಸಿಮ್‌ನಿಂದ ಸಿಮೆಂಟ್‌ ಕಂಪನಿಗಳನ್ನು ಖರೀದಿಸುವುದಾಗಿ ಅದಾನಿ ಘೋಷಿಸಿದಾಗಿನಿಂದ ಎಸಿಸಿ ಮತ್ತು ಅಂಬುಜಾ ಷೇರುಗಳು ಕ್ರಮವಾಗಿ ಶೇ.29 ಮತ್ತು ಶೇ. 60ರಷ್ಟು ಏರಿಕೆ ಕಂಡಿವೆ

Edited By : Abhishek Kamoji
PublicNext

PublicNext

21/09/2022 08:38 pm

Cinque Terre

27.19 K

Cinque Terre

0

ಸಂಬಂಧಿತ ಸುದ್ದಿ