ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಬೈನ್ ಬೀಚ್​ ಸೈಡ್​ ವಿಲ್ಲಾ ಖರೀದಿಸಿದ ಅಂಬಾನಿ ಪುತ್ರ

ನವದೆಹಲಿ: ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾಲೀಕ ಮುಖೇಶ್​ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ 80 ಮಿಲಿಯನ್​ ಡಾಲರ್​ ಮೌಲ್ಯದ ದುಬೈನ್ ಬೀಚ್​ ಸೈಡ್​ ವಿಲ್ಲಾ ಖರೀದಿ ಮಾಡಿದ್ದಾರೆ.

ಅನಂತ್​ ಅಂಬಾನಿ ಅವರು $93.3 ಬಿಲಿಯನ್ ಸಂಪತ್ತಿನ ವಾರಸುದಾರರಲ್ಲಿ ಒಬ್ಬರು. ಇವರ ಹೆಸರಿನಲ್ಲಿ ದುಬೈ ಕಡಲತೀರದ ಮಹಲು ಪಾಮ್​ ಆಕಾರದ ಕೃತಕ ದ್ವೀಪವನ್ನು ಖರೀದಿ ಮಾಡಲಾಗಿದೆ ಎಂದು ಬ್ಲೂಮ್​ಬರ್ಗ್ ವರದಿ ಮಾಡಿದೆ. ಈ ವಿಲ್ಲಾದ ವಿಶೇಷತೆ ಏನೆಂದರೆ 10 ಬೆಡ್​ರೂಂ, ಖಾಸಗಿ ಸ್ಪಾ, ಒಳಾಂಗಣ ಮತ್ತು ಹೊರಾಂಗಣ ಪೂಲ್‌ಗಳನ್ನು ಹೊಂದಿದೆ ಎಂದು ವರದಿಯಾಗಿದೆ.

ಈ ವಿಲ್ಲಾದ ಆಸ್ತಿ ಬಗ್ಗೆ ಇಲ್ಲಿಯವರೆಗೂ ರಹಸ್ಯವಾಗಿಡಲಾಗಿತ್ತು. ಇನ್ನೂ ಈ ವಿಲ್ಲಾವನ್ನು ತಮಗೆ ಬೇಕಾದ ರೀತಿಯಲ್ಲಿ ತಯಾರಿ ಮಾಡಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ.

ಆರ್‌ಐಎಲ್ ಗ್ರೂಪ್‌ನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಮತ್ತು ಸಂಸತ್ತಿನ ಸದಸ್ಯರಾದ ಪರಿಮಲ್ ನಾಥ್ವಾನಿ ಅವರು ವಿಲ್ಲಾವನ್ನು ನಿರ್ವಹಿಸುತ್ತಾರೆ. ನಥ್ವಾನಿ ಕೂಡ ಅಂಬಾನಿಗಳ ನಿಕಟವರ್ತಿ.

ದುಬೈನ ಪಾಮ್ ಜುಮೇರಾ ಐಷಾರಾಮಿ ಮನೆಯ ಜೊತೆಗೆ ಪರ್ಷಿಯನ್ ಗಲ್ಫ್‌ನ ನೀಲಿ ನೀರಿನ ಅದ್ಭುತ ನೋಟವನ್ನು ಹೊಂದಿರುವ ಐಷಾರಾಮಿ ಹೋಟೆಲ್‌ಗಳು, ಗ್ಲಿಟ್ಜಿ ಕ್ಲಬ್‌ಗಳು, ಸ್ಪಾಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಪ್ಲಾಶಿ ಅಪಾರ್ಟ್‌ಮೆಂಟ್ ಟವರ್‌ಗಳನ್ನು ಹೊಂದಿದೆ.

Edited By : Vijay Kumar
PublicNext

PublicNext

27/08/2022 07:01 pm

Cinque Terre

24.23 K

Cinque Terre

8

ಸಂಬಂಧಿತ ಸುದ್ದಿ