ನವದೆಹಲಿ: ಆರ್‌ಬಿಐ ರೆಪೊ ದರ ಹೆಚ್ಚಳ ಹಿನ್ನೆಲೆಯಲ್ಲಿ ಎಸ್‌ಬಿಐ ವಿವಿಧ ವರ್ಗಗಳ ಬಡ್ಡಿ ದರ ಏರಿಕೆ ಮಾಡಿದೆ. ಎಂಸಿಎಲ್ ಆರ್ ಬಡ್ಡಿ ದರ 20 ಮೂಲಾಂಶ ಏರಿಕೆಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ತನ್ನ ಬೆಂಚ್‌ಮಾರ್ಕ್ ಸಾಲದ ದರಗಳನ್ನು 20 ಮೂಲಾಂಶಗಳು ಹೆಚ್ಚಿಸಿದೆ, ಇದು ಸಾಲಗಾರರಿಗೆ ಇಎಂಐಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. 1 ರಿಂದ 3 ತಿಂಗಳ ಎಂಸಿಎಲ್ ಆರ್ ಬಡ್ಡಿ ದರ ಶೇ. 7.35 ಇದ್ದರೆ ಆರು ತಿಂಗಳಿಗೆ ಶೇ.7.65, ವರ್ಷಕ್ಕೆ ಶೇ.7.40, ಎರಡು ವರ್ಷಕ್ಕೆ ಶೇ. 7.90 ಮತ್ತು ಮೂರು ವರ್ಷದ ಸಾಲಕ್ಕೆ ಶೇ. 8 ಬಡ್ಡಿದರ ಇರಲಿದೆ.
ಹಣದುಬ್ಬರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬೆಂಚ್ ಮಾರ್ಕ್ ಸಾಲ ದರವನ್ನು ೫೦ ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದ ಕೆಲವು ದಿನಗಳ ನಂತರ ಸಾಲದ ದರದಲ್ಲಿ ಹೆಚ್ಚಳವಾಗಿದೆ. ಬಾಹ್ಯ ಬೆಂಚ್ ಮಾರ್ಕ್ ಆಧಾರಿತ ಸಾಲ ದರ ಮತ್ತು ರೆಪೋ-ಲಿಂಕ್ಡ್ ಲೆಂಡಿಂಗ್ ರೇಟ್ ಅನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲಾಗಿದ್ದು, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್-ಬೇಸ್ಡ್ ಲೆಂಡಿಂಗ್ ರೇಟ್‌ನಲ್ಲಿ ಹೆಚ್ಚಳವು ಎಲ್ಲಾ ಅವಧಿಯಾದ್ಯಂತ 20 ಬೇಸಿಸ್ ಪಾಯಿಂಟ್ ಗಳಷ್ಟಿದೆ.
PublicNext
16/08/2022 11:00 pm