ಕಳೆದ ವರ್ಷಕ್ಕೆ ಹೋಲಿಸಿದರೆ ಜಾನುವಾರು ಆಹಾರದ ವೆಚ್ಚವು ಸರಿಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದೆ. ಹಾಲಿನ ಬೆಲೆ ಏರಿಕೆಯಿಂದ ಹಾಲು ಉತ್ಪಾದಕರಿಗೆ ನೆರವಾಗಬಹುದು ಎಂದು ಅಮುಲ್ ತಿಳಿಸಿದೆ. ಹಾಗಾಗಿ ಹಾಲಿನ ಬೆಲೆ ಇನ್ನಷ್ಟು ಹೆಚ್ಚಾಗಲಿದೆ. ಆದ್ರೆ ಮೊದಲೇ ಬೆಲೆ ಏರಿಕೆಗೆ ಬೆಂದ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಬೀಳಲಿದೆ. ಪ್ರಖ್ಯಾತ ಹಾಲು ಉತ್ಪಾದಕ ಅಮುಲ್ ಹಾಲಿನ ಬೆಲೆ ಹೆಚ್ಚಾಗಿದೆ.
ನಾಳೆಯಿಂದ ಅಂದರೆ, ಆಗಸ್ಟ್ 17ರಿಂದ ಹಾಲಿನ ಬೆಲೆ ಹೆಚ್ಚಾಗಲಿದೆ. ಅಮುಲ್ ಬ್ರಾಂಡ್ನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಹಾಲಿನ ದರವನ್ನು ಲೀಟರ್ಗೆ ₹2 ಹೆಚ್ಚಿಸಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಯನ್ನು ಅಮುಲ್ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. ಒಟ್ಟಿನಲ್ಲಿ ದಿನೇ ದಿನೇ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರ ಮೇಲೆ ಹೊರೆ ಉಂಟಾಗುತ್ತಿದೆ.
PublicNext
16/08/2022 03:25 pm