ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತಕ್ಕೆ 5 ತಿಂಗಳ ಬಳಿಕ ಬಂತು ಉಕ್ರೇನ್ ಸೂರ್ಯಕಾಂತಿ ಎಣ್ಣೆ !

ನವದೆಹಲಿ: ಭಾರತ ದೇಶಕ್ಕೆ ಬರೋಬ್ಬರಿ ಐದು ತಿಂಗಳ ಬಳಿಕ ಉಕ್ರೇನ್ ನಿಂದ ಸೂರ್ಯಕಾಂತಿ ಎಣ್ಣೆ ಆಮದು ಆಗಿದೆ ಎಂದು ಮುಂಬೈ ಮೂಲದ ಬ್ರೋಕರ್ ಮತ್ತು ಟ್ರೇಡರ್ ಸಂಸ್ಥೆ ಸನ್‌ವಿನ್ ಈಗ ತಿಳಿಸಿದೆ.

ಉಕ್ರೇನ್ ದೇಶದ ತನ್ನ ಕೃಷಿ ಉತ್ಪನ್ನಗಳ ರಫ್ತಿಗಾಗಿಯೇ ಕಪ್ಪು ಸಮುದ್ರದ ಕೆಲ ಕಾರಿಡಾರ್‌ಗಳನ್ನ ಓಪನ್ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸುಮಾರು 50 ಸಾವಿರದಿಂದ 60 ಸಾವಿರ ಟನ್ ಎಣ್ಣೆ ಲಭ್ಯವಾಗಬಹುದು ಎಂದು ಸನ್‌ವಿನ್ ಕಂಪೆನಿಯ ಗ್ರೂಪ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಬಜೋರಿಯಾ ತಿಳಿಸಿದ್ದಾರೆ.

ನಾವು ಆಗಸ್ಟ್‌ನಿಂದಲೇ ದಾಸ್ತಾನು ಪಡೆಯಲು ಆಂಭಿಸುತ್ತೇವೆ. ಆದರೂ ಇದು ಹಡುಗಳ ಲಭ್ಯತೆ ಮೇಲೆನೆ ಅವಲಂಬಿತವಾಗಿರುತ್ತದೆ. ಹಾಗೇನೆ ಅರೆಯಬಲ್ಲ ಎಣ್ಣೆಬೀಜಗಳ ದಾಸ್ತಾನು ಉಕ್ರೇನ್ ದೇಶದಲ್ಲಿ ಸಾಕಷ್ಟು ಇದೆ ಎಂದು ಕೂಡ ಸಂದೀಪ್ ಬಜೋರಿಯಾ ವಿವರಿಸಿದ್ದಾರೆ.

Edited By :
PublicNext

PublicNext

29/07/2022 08:33 am

Cinque Terre

75.3 K

Cinque Terre

6