ನವದೆಹಲಿ: ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇಂದು (ಜುಲೈ 11) ಡಾಲರ್ ಎದುರು ರೂಪಾಯಿ ಮೌಲ್ಯ 79.44 ರೂಪಾಯಿಗೆ ಕುಸಿತ ಕಂಡಿದೆ. ಅಂದರೆ, ಪ್ರತಿ ಡಾಲರ್‌ಗೆ ಈಗ ನೀವು 79 ರೂಪಾಯಿಗೂ ಹೆಚ್ಚು ಪಾವತಿಸಬೇಕಿದೆ. ರೂಪಾಯಿ ಮೌಲ್ಯ ₹79 ದಾಟಿರುವುದು ಇದೇ ಮೊದಲು.
ಸೋಮವಾರದ ವಹಿವಾಟಿನ ಪ್ರಾರಂಭದಲ್ಲಿ ಅಮೆರಿಕನ್ ಡಾಲರ್ ಮೌಲ್ಯವು 79.30 ರೂಪಾಯಿ ಇತ್ತು. ನಂತರ ಕನಿಷ್ಠ 79.24 ಹಾಗೂ ಗರಿಷ್ಠ 79.49 ದಾಖಲಾಯಿತು. ಏತನ್ಮಧ್ಯೆ, ಬಿಎಸ್‌ಇ ಸೆನ್ಸೆಕ್ಸ್ 86.61 ಪಾಯಿಂಟ್‌ಗಳ ಇಳಿಕೆಯೊಂದಿಗೆ 54,395.23ಕ್ಕೆ ಕೊನೆಗೊಂಡರೆ, ಎನ್‌ಎಸ್‌ಇ ನಿಫ್ಟಿ 4.60 ಪಾಯಿಂಟ್‌ಗಳ ಕುಸಿತ ಕಂಡಿದೆ.
PublicNext
11/07/2022 05:49 pm