ಸ್ಯಾನ್ ಫ್ರಾನ್ಸಿಸ್ಕೊ: ನಕಲಿ ಖಾತೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡದ್ದಕ್ಕೆ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದಾರೆ.
ಹೌದು. ಸಾಮಾಜಿಕ ಮಾಧ್ಯಮ ಟ್ವಿಟರ್ ಅನ್ನು 44 ಶತಕೋಟಿ ಡಾಲರ್‌ಗೆ (₹3.49 ಲಕ್ಷ ಕೋಟಿ) ಖರೀದಿಸುವ ಒಪ್ಪಂದವನ್ನು ಕೈಬಿಡುತ್ತಿರುವುದಾಗಿ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಅವರು ಶುಕ್ರವಾರ ಹೇಳಿದ್ದಾರೆ.
‘ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ’ ಎಂದು ಮಸ್ಕ್ ತಿಳಿಸಿದ್ದಾರೆ.
ಒಪ್ಪಂದದ ನಿಯಮಗಳ ಪ್ರಕಾರ ಎಲೋನ್ ಮಸ್ಕ್ ವಹಿವಾಟನ್ನು ಪೂರ್ಣಗೊಳಿಸದಿದ್ದರೆ 1 ಶತಕೋಟಿ ಡಾಲರ್ ಬ್ರೇಕಪ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಬ್ರೇಕಪ್ ಶುಲ್ಕ ಪಾವತಿಸುವ ಸಂಬಂಧ ಟ್ವಿಟ್ಟರ್ ಈಗ ಕೋರ್ಟ್ ಮೊರೆ ಹೋಗಲಿದೆ. ಅಷ್ಟೇ ಅಲ್ಲದೇ ಟ್ವಿಟ್ಟರ್ ಷೇರು ಮೌಲ್ಯ ಕಡಿಮೆಯಾಗಲು ಮಸ್ಕ್ ನಿರ್ಧಾರವೇ ಕಾರಣ ಎಂದು ಆರೋಪಿಸಿದೆ.
PublicNext
09/07/2022 09:24 am