ನವದೆಹಲಿ : ವಿಶ್ವದ ಅತ್ಯಂತ ಪ್ರಸಿದ್ಧ ಎಜುಟೆಕ್ ಕಂಪನಿ ಬೈಜೂಸ್ ಬರೋಬ್ಬರಿ 2500 ಉದ್ಯೋಗಿಗಳನ್ನು ವಜಾಗೊಳಿಸಿದೆ.ಹೌದು ವಿಶ್ವದ ಅತ್ಯಂತ ಮೌಲ್ಯಯುತ ಎಜುಟೆಕ್ ಕಂಪನಿ ಬೈಜೂಸ್ ನಿಂದ 2500 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಿ ಈ ಕಾರಣ ಎನ್ನಲಾಗಿದೆ.
ಸದ್ಯಕ್ಕೆ ಈ ಕಂಪನಿಯ ಮೌಲ್ಯ 2,200 ಕೋಟಿ ಅಮೆರಿಕನ್ ಡಾಲರ್. ಬೈಜೂ ರವೀಂದ್ರನ್ ನೇತೃತ್ವದ ಈ ಯುನಿಕಾರ್ನ್ ಆಕ್ರಮಣಕಾರಿಯಾಗಿ ವೆಚ್ಚ ಕಡಿತದ ಹಾದಿಯಲ್ಲಿದೆ.
ಸತತ ಎರಡು ವರ್ಷ- ಕೊರೊನಾ ಕಾಲದಲ್ಲಿ ಹುಚ್ಚಾಪಟ್ಟೆ ಬೇಡಿಕೆ ಪಡೆದಿದ್ದ ಎಜುಟೆಕ್ ಕಂಪನಿಗಳಿಗೆ ಈಗ ಬೇಡಿಕೆ ಕಡಿಮೆ ಆಗುತ್ತಿರುವುದು ಸಮಸ್ಯೆಯಾಗಿದೆ. ಹಾಗಾಗಿ ಬೈಜೂಸ್ ನಿಂದ ಪೂರ್ಣಾವಧಿ, ಗುತ್ತಿಗೆ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಅದರಲ್ಲಿ ಟಾಪರ್, ವೈಟ್ ಹ್ಯಾಟ್ ಜೂನಿಯರ್ ನಲ್ಲಿಯ ಸಿಬ್ಬಂದಿಯೂ ಸೇರಿದ್ದಾರೆ.
ಅಲ್ಲಿನ ಕೋರ್ ಟೀಮ್ ಮಾರಾಟ ಮತ್ತು ಮಾರ್ಕೆಟಿಂಗ್, ಆಪರೇಷನ್ಸ್, ಕಂಟೆಂಟ್ ಮತ್ತು ಡಿಸೈನ್ ಟೀಮ್ ನಿಂದ ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ಮೂಲಗಳು ತಿಳಿಸಿವೆ ಎಂದು ತನ್ನ ಎಕ್ಸ್ ಕ್ಲೂಸಿವ್ ವರದಿಯಲ್ಲಿ ಮನಿಕಂಟ್ರೋಲ್ ತಿಳಿಸಿದೆ.
PublicNext
30/06/2022 06:35 pm