ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜುಲೈನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ ತಿಂಗಳಲ್ಲಿ ಬರುವ ರಜಾದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಆಯಾ ರಾಜ್ಯಗಳಿಗೆ ಸಂಬಂಧಪಟ್ಟಂತೆ 14 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಸಿಗಲಿವೆ.

ಯಾವ ದಿನ ರಜೆ:

ಜುಲೈ 1: ಭುವನೇಶ್ವರ ಹಾಗೂ ಇಂಫಾಲ ಇತರ ಪ್ರದೇಶಗಳಲ್ಲಿ ರಥ್ ಯಾತ್ರೆ ಹಾಗೂ ಕಂಗ್ ಹಬ್ಬದ ಪ್ರಯುಕ್ತ ಬ್ಯಾಂಕ್‌ ರಜೆ

ಜುಲೈ 3: ತಿಂಗಳ ಮೊದಲ ಭಾನುವಾರ

ಜುಲೈ 7: ಖರ್ಚಿ ಪೂಜೆಯ ಅಂಗವಾಗಿ ಅಗರ್ತಲಾದಲ್ಲಿ ರಜೆ

ಜುಲೈ 9: ಬಕ್ರೀದ್ ಅಂಗವಾಗಿ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್ ಬಂದ್‌ (ಎರಡನೇ ಶನಿವಾರವಾದ್ದರಿಂದ ದೇಶದ ಇತರೆಡೆ ಸಹ ರಜೆ)

ಜುಲೈ 10: ಎರಡನೇ ಭಾನುವಾರ

ಜುಲೈ 11: ಈದ್ ಅಲ್ -ಅಳಾ ಅಂಗವಾಗಿ ಶ್ರೀನಗರ ಹಾಗೂ ಜಮ್ಮುವಿನಲ್ಲಿ ರಜೆ

ಜುಲೈ 13: ಭಾನು ಜಯಂತಿ ಅಂಗವಾಗಿ ಗ್ಯಾಂಗ್‌ಟಕ್‌ನಲ್ಲಿ ರಜೆ

ಜುಲೈ 14: ಬೆಹ್ದಿಂಖ್ಲಾಹಂ(Behdienkhlam) ಹಿನ್ನೆಲೆಯಲ್ಲಿ ಶಿಲ್ಲಾಂಗ್ ಪ್ರದೇಶದಲ್ಲಿ ಬ್ಯಾಂಕ್ ರಜೆ

ಜುಲೈ 16: ಹರೆಲಾ ಅಂಗವಾಗಿ ಡೆಹ್ರಾಡೂನ್ ಭಾಗದಲ್ಲಿ ರಜೆ

ಜುಲೈ 17: ಮೂರನೇ ಭಾನುವಾರ

ಜುಲೈ 23: ನಾಲ್ಕನೇ ಶನಿವಾರ

ಜುಲೈ 24: ನಾಲ್ಕನೇ ಭಾನುವಾರ

ಜುಲೈ 26: ಕೇರ್ ಪೂಜಾ ಅಂಗವಾಗಿ ಅಗರ್ತಲಾದಲ್ಲಿ ರಜೆ

ಜುಲೈ 31: ತಿಂಗಳ ಐದನೇ ಭಾನುವಾರ

Edited By : Vijay Kumar
PublicNext

PublicNext

27/06/2022 07:42 pm

Cinque Terre

30.4 K

Cinque Terre

2

ಸಂಬಂಧಿತ ಸುದ್ದಿ