ನವದೆಹಲಿ : ದುಬಾರಿ ದುನಿಯಾದಲ್ಲಿ ಜನ ಜೀವನ ಸಾಕಷ್ಟು ತ್ರಾಸದಾಯಕವಾಗಿತ್ತು. ಇದರ ಮಧ್ಯೆ ಒಂದು ಸಮಾಧಾನದ ಸುದ್ದಿ ಅಂದ್ರೆ ಬ್ರ್ಯಾಂಡೆಡ್ ತಾಳೆ ಎಣ್ಣೆ, ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಯ ಬೆಲೆಯನ್ನು ಲೀಟರ್ ಗೆ 15 ರೂ.ವರೆಗೆ ಕಡಿಮೆ ಮಾಡಲಾಗಿದೆ.
ತಾಳೆ ಎಣ್ಣೆ ಬೆಲೆಯಲ್ಲಿ ಲೀಟರ್ ಗೆ 7-8 ರೂಪಾಯಿ ಕುಸಿತ ಕಂಡಿದ್ದು, ಸೂರ್ಯಕಾಂತಿ ಎಣ್ಣೆ ದರ ಲೀಟರ್ಗೆ 10-15 ರೂಪಾಯಿ ಇಳಿಕೆಯಾಗಿದೆ.
ಸೋಯಾಬೀನ್ ತೈಲ ಬೆಲೆ ಲೀಟರ್ ಗೆ 5 ರೂಪಾಯಿ ಕುಸಿದಿದೆ.ಆದರೆ, ಪ್ರೀಮಿಯಂ ಬ್ರ್ಯಾಂಡ್ ಗಳು ಗ್ರಾಹಕರಿಗೆ ಬೆಲೆ ಇಳಿಕೆಯನ್ನು ವರ್ಗಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಭಾರತೀಯ ತರಕಾರಿ ತೈಲ ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ರಾವ್ ದೇಸಾಯಿ ಹೇಳಿದ್ದಾರೆ.
PublicNext
17/06/2022 09:52 pm