ನವದೆಹಲಿ: ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ ಸಂಸ್ಥೆಯು ಏರ್ ಬಸ್ ನಿರ್ಮಿತ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಸದ್ಯಕ್ಕೆ ಎಷ್ಟು ವಿಮಾನಗಳನ್ನು ಖರೀದಿಸಬೇಕೆಂದು ವ್ಯಾಪಾರ ನಿರ್ಣಯ ಆಗಿಲ್ಲ ಎಂದು ತಿಳಿದು ಬಂದಿದೆ.
ಏರ್‌ಬಸ್ ಎ350 ವಿಮಾನವು ಬೃಹತ್ ಗಾತ್ರದ ಇಂಧನ ಟ್ಯಾಂಕ್ ಹೊಂದಿರುತ್ತದೆ. ಭಾರತದಿಂದ ಅಮೆರಿಕ ಸೇರಿದಂತೆ ದೂರದ ಪ್ರಯಾಣಕ್ಕೆ ಇದರಿಂದ ಅನುಕೂಲವಾಗಲಿದೆ. ಮುಂದಿನ ಮಾರ್ಚ್ ತಿಂಗಳ ಹೊತ್ತಿಗೆ ಮೊದಲ ಎ350 ವಿಮಾನವು ಸಂಸ್ಥೆಗೆ ಸೇರಲಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
PublicNext
17/06/2022 01:57 pm