ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೂಪಾಯಿ ಮೌಲ್ಯ ದಾಖಲೆ ಕುಸಿತ: ಡಾಲರ್ ಎದುರು 78.29ಕ್ಕೆ ಆರಂಭಿಕ ವಹಿವಾಟು

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.ಇದೇ ಮೊದಲ ಬಾರಿಗೆ ಡಾಲರ್ ಎದುರು ರಾಪಾಯಿ ಮೌಲ್ಯ ₹ 78.29ಕ್ಕೆ ಕುಸಿಯಿತು. ಇದು ಹಿಂದಿನ ವಹಿವಾಟಿನ ಮೌಲ್ಯಕ್ಕೆ ಹೋಲಿಸಿದರೆ 36 ಪೈಸೆ ಕಡಿಮೆ ಮತ್ತು ಸಾರ್ವಕಾನಿಕ ಕನಿಷ್ಠ ಮೊತ್ತ ಎನಿಸಿದೆ.

ಕಳೆದ ಶುಕ್ರವಾರ ಭಾರದ ರೂಪಾಯಿ ಅಮೆರಿಕದ ಡಾಲರ್ ಎದುರು 19 ಪೈಸೆಗಳಷ್ಟು ಮೌಲ್ಯ ಕಳೆದುಕೊಂಡು, ₹ 77.93ರ ಮೌಲ್ಯದಲ್ಲಿ ವಹಿವಾಟು ನಡೆಸಿತ್ತು.

ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ವಿದೇಶಿ ಬಂಡವಾಳದ ಹೊರಹರಿವು ಇದಕ್ಕೆ ಕಾರಣ ಎನ್ನಲಾಗಿದೆ.ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್ ಚೇಂಜ್ ನಲ್ಲಿ ಭಾರತದ ರೂಪಾಯಿಯು ಅಮೆರಿಕದ ಡಾಲರ್ ಎದುರು ₹ 78.20 ಮೌಲ್ಯದೊಂದಿಗೆ ವಹಿವಾಟು ಆರಂಭಿಸಿತು. ನಂತರ ಒಮ್ಮೆಲೆ ₹ 78.29ಕ್ಕೆ ಕುಸಿದಿದೆ.

Edited By : Nirmala Aralikatti
PublicNext

PublicNext

13/06/2022 03:49 pm

Cinque Terre

26.4 K

Cinque Terre

3

ಸಂಬಂಧಿತ ಸುದ್ದಿ