ಮಹಿಂದ್ರಾ ಕಂಪನಿಯ ಮಹೀಂದ್ರಾ ಸ್ಕಾರ್ಪಿಯೋ N ಅನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ವಿಶೇಷವಾಗಿರೋ ಈ ಸ್ಕಾರ್ಪಿಯೋವನ್ನ ಜೂನ್-27 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪನಿ ಡಿಸೈಡ್ ಮಾಡಿದೆ.
ಸ್ಕಾರ್ಪಿಯೋದ ಈ N ಗೋಲ್ಡ್ ಎಡಿಷನ್ ವಿನ್ಯಾಸ ಆಕರ್ಷಕವಾಗಿಯೇ ಇದೆ. ಆದರೆ, ಸದ್ಯದ ಸ್ಕಾರ್ಪಿಯೋ ಕಾರ್‌ಗೂ ಮತ್ತು ಈ ಸ್ಕಾರ್ಪಿಯೋ ಬೆಲೆ ಮತ್ತು ವಿನ್ಯಾಸದಲ್ಲಿ ಕೊಂಚ ಬದಲಾವಣೆ ಕೂಡ ಇದೆ.
ಸ್ಕಾರ್ಪಿಯೋ ಎನ್ ಸ್ಕಾರ್ಪಿಯೋ ಜೆನ್ ಗಿಂತಲೂ ದುಬಾರಿಯಾಗಿಯೇ ಇರುತ್ತದೆ. ಇದು ಬಂದ್ಮೇಲೆ ಸ್ಕಾರ್ಪಿಯೋ ಜೆನ್ ಅನ್ನ ಸ್ಥಗಿತಗೊಳಿಸಲಾಗುವುದಿಲ್ಲ. ಅದು ಸ್ಕಾರ್ಪಿಯೋ ಕ್ಲಾಸಿಕ್ ಆಗಿಯೇ ಮಾರುಕಟ್ಟೆಯಲ್ಲಿ ಇರುತ್ತದೆ ಅಂತಲೇ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
PublicNext
13/06/2022 02:15 pm