ಕೊರೊನಾ ಕಾಲ ಒಂದು ರೀತಿ ಐಟಿ ಮಂದಿಗೆ ಸುವರ್ಣ ಕಾಲವೇ ಆಗಿತ್ತು. ಆಗ ಮನೆಯಲ್ಲಿಯೇ ಕುಳಿತು ಕೆಲಸ ಮಾಡಿದ್ದ ಈ ಮಂದಿ ಈಗ ಕಚೇರಿಗೆ ಹೋಗಿ ಕೆಲಸ ಮಾಡಲು ಅಷ್ಟೇನೂ ಹೆಚ್ಚು ಇಷ್ಟಪಡುತ್ತಿಲ್ಲ. ಮನೆಯಿಂದಲೇ ಈಗಲೂ ಕೆಲಸ ಮಾಡ್ತೀವಿ ಅಂತಲೇ ಹೇಳುತ್ತಿದ್ದಾರೆ.
ಹೌದು. ಇದರಿಂದ ಐಟಿ ಕಂಪನಿಗಳಿಗೆ ಒಂದು ರೀತಿ ಸಂಕಷ್ಟವೇ ಎದುರಾಗಿದೆ. ಕಚೇರಿಗೆ ಬಂದು ಕೆಲಸ ಮಾಡ್ರಪ್ಪೋ ಎಂದು ಗೋಗರಿಯೋ ಸ್ಥಿತಿ ಬಂದು ಬಿಟ್ಟಿದೆ.
ನಾಸ್ಕಾಂ ಬಿಸಿಜಿ ನಡೆಸಿದ್ದ ಸಮೀಕ್ಷೆಯಲ್ಲಿ ಇನ್ನು ಒಂದು ಸತ್ಯ ಹೊರ ಬಿದ್ದಿದೆ. ಐಟಿ ಮಂದಿಯ ಒಟ್ಟು ಸಮೀಕ್ಷೆ ವರದಿ ನಿಜಕ್ಕೂ ವಿಶೇಷವಾಗಿಯೇ ಇದೆ.ಶೇಕಡ 5 ರಷ್ಟು ಮಂದಿ ಮಾತ್ರ ಕಚೇರಿಗೆ ಬಂದು ಕೆಲಸ ಮಾಡಲು ರೆಡಿ ಇದ್ದಾರೆ.
2021ರ ಜುಲೈ-ಸೆಪ್ಟೆಂಬರ್ ನಲ್ಲಿ ಈ ಸಮೀಕ್ಷೆ ನಡೆದಿದ್ದು,ಈ ಸಮೀಕ್ಷೆಯಲ್ಲಿ ವಿಶ್ವದಾದ್ಯಂತ 2 ಲಕ್ಷ ಟೆಕ್ಕಿಗಳು ಭಾಗಿ ಆಗಿದ್ದರು. ಇದರಲ್ಲಿ 500 ಜನ ಭಾರತೀಯರು ಕೂಡ ಪಾಲ್ಗೊಂಡಿದ್ದರು.
PublicNext
10/06/2022 06:32 pm