ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿಐ ಜೊತೆ ಕ್ರೆಡಿಟ್ ಕಾರ್ಡ್‌ಗಳ ಜೋಡಣೆ: ಆರ್‌ಬಿಐ ಪ್ರಸ್ತಾವನೆ

ಬೆಂಗಳೂರು: ಯುಪಿಐ (ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್) ಪ್ಲಾಟ್‌ಫಾರ್ಮ್ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ, ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಯುಪಿಐ ಅಡಿಯನಲ್ಲಿ ಕ್ರೆಡಿಟ್ ಕಾರ್ಡ್‌ಗಳ ಜೋಡಣೆಗೆ ಅನುಕೂಲ ಮಾಡಿಕೊಡಲು ಪ್ರಸ್ತಾವನೆ ಸಲ್ಲಿಸಿದೆ.

ಈ ಸೌಲಭ್ಯ ರುಪೇ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪ್ರಾರಂಭವಾಗುತ್ತದೆ, ಅವುಗಳನ್ನು ಯುಪಿಐಗೆ ಲಿಂಕ್ ಮಾಡಲಾಗುತ್ತದೆ. ಇದು ಬಳಕೆದಾರರಿಗೆ ಹೆಚ್ಚುವರಿ ಅನುಕೂಲವನ್ನು ಒದಗಿಸುತ್ತದೆ ಮತ್ತು ಡಿಜಿಟಲ್ ಪಾವತಿಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಪ್ರಸ್ತುತ, ಯುಪಿಐ ಬಳಕೆದಾರರು ಡೆಬಿಟ್ ಕಾರ್ಡ್‌ಗಳ ಮೂಲಕ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ಲಿಂಕ್ ಮಾಡುವ ಮೂಲಕ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಈ ಹೊಸ ಪ್ರಸ್ತಾವನೆಯೊಂದಿಗೆ, ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ ಯೊಂದಿಗೆ ಲಿಂಕ್ ಮಾಡಬಹುದು. ಈಗ ನಡೆಯುತ್ತಿರುವ ಐದು ವಹಿವಾಟುಗಳಲ್ಲಿ ಎರಡು ನಗದುರಹಿತವಾಗಿವೆ. ಡಿಜಿಟಲ್ ಪಾವತಿ ಕಂಪನಿ ಫೋನ್‌ಪೇ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ಇತ್ತೀಚಿನ ವರದಿಯು 2026ರ ವೇಳೆಗೆ ಮೂರನೇ ಎರಡರಷ್ಟು ಪಾವತಿ ವಹಿವಾಟುಗಳು ಡಿಜಿಟಲ್ ಆಗಲಿವೆ ಎಂದು ಹೇಳಿದೆ.

Edited By : Nagaraj Tulugeri
PublicNext

PublicNext

08/06/2022 10:59 pm

Cinque Terre

29.61 K

Cinque Terre

0

ಸಂಬಂಧಿತ ಸುದ್ದಿ