ಮುಂಬೈ: ಭಾರತ ಸರ್ಕಾರ ಈಗೊಂದು ನಿರ್ಧಾರ ತೆಗೆದುಕೊಂಡಿದೆ. ಸರಿ ಸುಮಾರು 4.69 ಲಕ್ಷ ಟನ್ ಗಷ್ಟು ಗೋಧಿ ರಫ್ತು ಮಾಡೋಕೆ ಅವಕಾಶ ಕೊಟ್ಟಿದೆ.
ಭಾರತದಿಂದ ರಫ್ತಾಗುವ ಗೋಧಿಯು ಮುಖ್ಯವಾಗಿ ಬಾಂಗ್ಲಾದೇಶ,ಫಿಲಿಪ್ಪೀನ್ಸ್,ತಾಂಜೀನಿಯಾ ಹಾಗೂ ಮಲೇಷ್ಯಾ ದೇಶಗಳಿಗೆ ರಫ್ತಾಗುತ್ತಿದೆ.
ಕೇಂದ್ರ ಸರ್ಕಾರ ಕಳೆದ ತಿಂಗಳು ಗೋಧಿ ರಫ್ತನ್ನ ನಿಷೇಧಿಸಿತ್ತು. ಇದರಿಂದ 17 ಲಕ್ಷ ಟನ್ ಗೋಧಿ ಬಂದರುಗಳಲ್ಲಿಯೇ ಉಳಿದಿತ್ತು. ಆದರೆ, ಇದನ್ನ ಹಾಗೆ ಉಳಿಸಿಕೊಡರೆ, ಮುಂಗಾರು ಮಳೆ ಹಿನ್ನೆಲೆಯಲ್ಲಿ ಹಾಳಾಗೋ ಚಾನ್ಸ್ ಜಾಸ್ತಿ ಇದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
03/06/2022 12:25 pm