ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್ಥಿಕ ಬೆಳವಣಿಗೆ ಶೇ 8.7, ಜಿಡಿಪಿಯ ವಿತ್ತೀಯ ಕೊರತೆ ಶೇ 6.7

2021-22ನೇ ಸಾಲಿನ ಆರ್ಥಿಕ ಪ್ರಗತಿ ಶೇ 8.7ರಷ್ಟು ದಾಖಲಾಗಿದ್ದು, ಮಾರ್ಚ್ ತಿಂಗಳ ನಿವ್ವಳ ತಲಾ ಆದಾಯ (ಜಿಡಿಪಿ) ಶೇ 4.1ರಷ್ಟಿದೆ. 2021-22 ರ ಆರ್ಥಿಕ ಬೆಳವಣಿಗೆಯು 2020-21 ರಲ್ಲಿ ದಾಖಲಾದ ಶೇಕಡಾ 6.6 ರ ನೆಗಟಿವ್ ಬೆಳವಣಿಗೆಗಿಂತ ಸುಧಾರಣೆ ಕಂಡು ಬಂದಿದೆ.

ಇದೇ ವೇಳೆ, ಮಾರ್ಚ್ ತ್ರೈಮಾಸಿಕ (2021-22)ದಲ್ಲಿ ಶೇ 4.1 ರಷ್ಟು ಬೆಳವಣಿಗೆ ಕಂಡು ಬಂದಿದ್ದು, 2020-21ರ ಮಾರ್ಚ್ ತ್ರೈಮಾಸಿಕದಲ್ಲಿ ಕಂಡುಬಂದಿರುವ ಬೆಳವಣಿಗೆಗೆ ಹೋಲಿಸಿದರೆ, ಅಲ್ಪ ಪ್ರಮಾಣದಲ್ಲಿ ಶೇ 1.6ರಷ್ಟು ಹೆಚ್ಚಳ ಕಂಡಿದೆ.

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಅಂದಾಜಿಸಿರುವ 8.9 ಶೇಕಡಾ ಬೆಳವಣಿಗೆಗಿಂತ 2021-22 ರ GDP projection ಕಡಿಮೆ ಬಂದಿದೆ. ಯೋಜಿತ 8.7 ರಷ್ಟು ಬೆಳವಣಿಗೆಯು ಭಾರತೀಯ ರಿಸರ್ವ್ ಬ್ಯಾಂಕ್ (RBI) 2021-22 ರ GDP ಬೆಳವಣಿಗೆಯ ಶೇಕಡಾ 9.5 ರ ಅಂದಾಜಿಗಿಂತ ಕಡಿಮೆಯಾಗಿದೆ.

ಮಾರ್ಚ್ ತ್ರೈಮಾಸಿಕ ಬೆಳವಣಿಗೆಯು ಈ ಅವಧಿಗೆ ಆರ್‌ಬಿಐನ ನಿರೀಕ್ಷೆಗಿಂತ ಕಡಿಮೆಯಾಗಿದೆ, ಇದು ಶೇಕಡಾ 6.1 ಎಂದು ಅಂದಾಜಿಸಲಾಗಿದೆ.

Edited By : Vijay Kumar
PublicNext

PublicNext

31/05/2022 08:00 pm

Cinque Terre

24.93 K

Cinque Terre

0

ಸಂಬಂಧಿತ ಸುದ್ದಿ