ನವದೆಹಲಿ: ಅಮೆರಿಕಾ ದೇಶ ಭಾರತದೊಂದಿಗೆ ಒಳ್ಳೆ ಸಂಬಂಧ ಹೊಂದುತ್ತಿದೆ. ಚೀನಾವನ್ನ ಹಿಂದಿಕ್ಕಿದ ಅಮೆರಿಕಾ ಈಗ 2021-2022 ಸಾಲಿನಲ್ಲಿ ಭಾರತದ ನಂಬರ್ ಒನ್ ಪಾಲುದಾರ ದೇಶವಾಗಿ ಹೊರಹೊಮ್ಮಿದೆ.
ಎರಡೂ ರಾಷ್ಟ್ರಗಳ ನಡುವೆ 2020-2021 ನೇ ಸಾಲಿನಲ್ಲಿ 6.61 ಲಕ್ಷ ಕೋಟಿ ರೂ. ವ್ಯಾಪಾರ ನಡೆದಿದೆ. 2021-2022 ನೇ ಸಾಲಿಗೆ ಅದು 9.07 ಲಕ್ಷ ಕೋಟಿ ರೂ. ತಲುಪಿದೆ ಎಂದು ಕೇಂದ್ರದ ವಾಣಿಜ್ಯ ಸಚಿವಾಲಯ ಈಗ ಹೇಳಿದೆ.
ಅಮೆರಿಕಕ್ಕೆ ಭಾರತದ ರಫ್ತು 5.78 ಲಕ್ಷ ಕೋಟಿ ರೂ. ಆಗಿದೆ.ಆಮದು ಪ್ರಮಾಣ 3.29 ಲಕ್ಷ ಕೋಟಿ ರೂ.ತಲುಪಿದ್ದು, ಈ ಲೆಕ್ಕಾಚಾರ ಉಭಯ ದೇಶಗಳ ಒಳ್ಳೆ ಸಂಬಂಧಕ್ಕೆ ಸಾಕ್ಷಿ ಎಂಬಂತೆ ಕಾಣುತ್ತಿವೆ.
PublicNext
30/05/2022 09:47 am