ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿ ಶೀಘ್ರದಲ್ಲಿಯೇ ಖಾದ್ಯ ತೈಲ ಬೆಲೆ ಇಳಿಕೆ !

ನವದೆಹಲಿ: ಭಾರತದಲ್ಲಿ ಸದ್ಯ ತೈಲ ಬೆಲೆ ಗಗನ್ಕಕೇರಿದೆ. ಇದರಿಂದ ಜನ ಕೂಡ ಹೈರಾಣಾಗಿದ್ದಾರೆ. ಆದರೆ, ಈಗ ತೈಲ ಬೆಲೆ ಕಡಿಮೆ ಆಗೋ ದಿನಗಳು ಸನಿಹಕ್ಕೆ ಬಂದಿವೆ.

ಹೌದು. ಇಂಡೋನೇಷಿಯಾದಿಂದ 2 ಲಕ್ಷ ಟನ್ ತಾಳೆ ಎಣ್ಣೆ ಭಾರತಕ್ಕೆ ರವಾನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ತೈಲ ಹೆಚ್ಚಳ ಆಗಲಿದ್ದು, ಇದರಿಂದ ಖಾದ್ಯ ತೈಲ ಬೆಲೆ ಇಳಿಕೆ ಆಗೋ ಸಾಧ್ಯತೆ ಇದೆ ಎಂದು ತೈಲ ವ್ಯಾಪಾರಿಗಳು ತಿಳಿಸಿದ್ದಾರೆ.

ತಾಳೆ ಎಣ್ಣೆ ಮೇಲೆ ಇಂಡೋನೇಷಿಯಾ ವಿಧಿಸಿದ್ದ ನಿರ್ಬಂಧವನ್ನ ಈಗ ಹಿಂಪಡೆದಿದೆ. ಹಾಗಾಗಿಯೇ ಮೇ-23 ರಂದು 2 ಲಕ್ಷ ಟನ್ ತಾಳೆ ಎಣ್ಣೆ ಹೊತ್ತ ಹಡಗು ಈಗಾಗಲೇ ಪ್ರಯಾಣ ಬೆಳೆಸಿದೆ. ಈ ವಾರಾಂತ್ಯದಲ್ಲಿ ಭಾರತಕ್ಕೂ ತಲುಪಲಿದ್ದು, ಜೂನ್-15 ರ ಹೊತ್ತಿಗೆ ಚಿಲ್ಲರೆ ವ್ಯಾಪಾರಿಗಳಿಗೂ ಲಭ್ಯವಾಗಲಿದೆ ಎಂದು ಖಾದ್ಯ ತೈಲ ಆಮದು ಸಂಸ್ಥೆ ಸನ್ ವಿನ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಸಂದೀಪ್ ಬಜೋರಿಯಾ ತಿಳಿಸಿದ್ದಾರೆ.

Edited By :
PublicNext

PublicNext

27/05/2022 03:39 pm

Cinque Terre

25.92 K

Cinque Terre

4

ಸಂಬಂಧಿತ ಸುದ್ದಿ