ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗೊಂದು ಅಧಿಸೂಚನೆ ಹೊರಡಿಸಿದೆ. ವಾಹನ ಖರೀದಿಸಿದ ಮೂರನೇ ಈ ಅಧಿಸೂಚನೆ ಪ್ರಕಾರ ವ್ಯಕ್ತಿ ವಾಹನದ ವಿಮೆ ಕಂತನ್ನ ಹೆಚ್ಚಿಗೆ ಕಟ್ಟಬೇಕಾಗುತ್ತದೆ.
ಹೌದು. ಜೂನ್-1 ರಿಂದ ಕಾರು,ದ್ವಿಚಕ್ರ ವಾಹನ, ಸರಕು ಸಾಗಣೆ ವಾಹನಗಳ ಥರ್ಡ್ ಪಾರ್ಟಿ ವಿಮೆಯನ್ನ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೆಚ್ಚಳ ಮಾಡುತ್ತಿದೆ. ಈಗಾಗಲೇ ಪರಿಷ್ಕೃತ ಅಧಿಸೂಚನೆಯನ್ನ ಹೊರಡಿಸಲಾಗಿದೆ.
ವಿಮೆ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಚಿವಾಲಯ ಇದೇ ಮೊದಲ ಬಾರಿಗೆ ಸಮಾಲೋಚನೆ ನಡೆಸಿದೆ. ಥರ್ಡ್ ಪಾರ್ಟಿ ಮೊತ್ತವನ್ನ ನಿರ್ಧರಿಸಿದೆ. ಆದರೆ, ಈ ಮೊದಲು ಈ ವಿಮೆ ಕಂತಿನ ಹೆಚ್ಚಳವನ್ನ ವಿಮೆ ನಿಯಂತ್ರಣ ಮತ್ತು ಪ್ರಾಧಿಕಾರ ಹೊರಡಿಸುತ್ತಿತ್ತು.
PublicNext
26/05/2022 07:29 pm