ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಬಳ ಶೇ.88 ಹೆಚ್ಚಳ

ಬೆಂಗಳೂರು: ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಲೀಲ್ ಪರೇಖ್ ಅವರ ಸಂಬಳವನ್ನು ಶೇ.88 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪರೇಖ್ ಅವರು ಸದ್ಯ ವಾರ್ಷಿಕ 79.75 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ. ಅವರು ಈಗ ಭಾರತದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.

ಇನ್ಫೋಸಿಸ್ ತನ್ನ ಷೇರುದಾರರ ವಾರ್ಷಿಕ ವರದಿಯಲ್ಲಿ ಸಿಇಒ ವೇತನದ ವಿವರಗಳನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಇನ್ಫೋಸಿಸ್ ಕಂಪನಿಯ ಉದ್ಯಮದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ಇದರಲ್ಲಿ ಪರೇಖ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆ ಅವರ ವೇತನವನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.

Edited By : Nagaraj Tulugeri
PublicNext

PublicNext

26/05/2022 06:10 pm

Cinque Terre

23.49 K

Cinque Terre

0

ಸಂಬಂಧಿತ ಸುದ್ದಿ