ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್ಥಿಕ ಹಿಂಜರಿತ : 424 ಉದ್ಯೋಗಿಗಳನ್ನು ಮನೆಗೆ

ನವದೆಹಲಿ: ಆರ್ಥಿಕ ಹಿಂಜರಿತದಿಂದ ನವದೆಹಲಿಯ Edtech ಯುನಿಕಾರ್ನ್ ವೇದಾಂತು ಕಂಪನಿ 424 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕರಾದ ವಂಶಿ ಕೃಷ್ಣ ಅವರು ಬ್ಲಾಗ್ ನಲ್ಲಿ ಉದ್ಯೋಗಿಗಳಿಗೆ ಮುಂಬರುವ ತ್ರೈಮಾಸಿಕಗಳಿಗೆ ಬಂಡವಾಳದ ಕೊರತೆಯಿದೆ ಎಂದು ಹೇಳಿದ್ದಾರೆ.

ವೇದಾಂತು ಈ ತಿಂಗಳ ಆರಂಭದಲ್ಲಿ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿ ಮಾಡಿತ್ತು. ಈ ಬಾರಿ ಕಂಪನಿಯು ಶೇ.7ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.

ಯುರೋಪ್ ನಲ್ಲಿನ ಯುದ್ಧ, ಮುಂಬರುವ ಆರ್ಥಿಕ ಹಿಂಜರಿತದ ಭಯ ಮತ್ತು ಫೆಡ್ ದರದ ಬಡ್ಡಿ ಏರಿಕೆಗಳು ಜಾಗತಿಕವಾಗಿ ಮತ್ತು ಭಾರತದಲ್ಲಿ ಷೇರುಗಳಲ್ಲಿ ಭಾರಿ ತಿದ್ದುಪಡಿಯೊಂದಿಗೆ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಿವೆ. ಮುಂಬರುವ ತ್ರೈಮಾಸಿಕಗಳಿಗೆ ಬಂಡವಾಳದ ಕೊರತೆ ಇರುತ್ತದೆ.' ಎಂದು ಬರೆದಿದ್ದಾರೆ.

Edited By : Nirmala Aralikatti
PublicNext

PublicNext

18/05/2022 10:28 pm

Cinque Terre

29.97 K

Cinque Terre

0

ಸಂಬಂಧಿತ ಸುದ್ದಿ