ನ್ಯೂಯಾರ್ಕ್: ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಕೇವಲ ಶ್ರೀಮಂತ ಅಲ್ಲ. ಅಷ್ಟೇ ರಿಸ್ಕ್ ತೆಗೆದುಕೊಳ್ಳುವ ಧೈರ್ಯವಂತನೂ ಹೌದು. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.
ಎಲಾನ್ ಮಸ್ಕ್ ಟ್ವಿಟರ್ ಖರೀದಿಗೆ ಮುಂದಾಗಿದ್ದೇನೋ ನಿಜ, ಆದರೆ, ಎಲ್ಲ ದುಡ್ಡನ್ನೂ ತಾನೇ ಹಾಕಿಲ್ಲ. ಬದಲಾಗಿ, ಹಲವರಿಂದ ಹೆಚ್ಚು ಕಡಿಮೆ 54 ಸಾವಿರ ಕೋಟಿ ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ್ದ ಈ ಹಣದಿಂದಲೇ ಟ್ವಿಟರ್‌ನನ್ನ ಖರೀದಿಸುತ್ತಿದ್ದಾರೆ.
ಅಂದ್ಹಾಗೆ ಎಲಾನ್ ಯಾರಿಂದೆಲ್ಲ ದುಡ್ಡು ಸಂಗ್ರಹಿಸಿದ್ದಾರೆ ಗೊತ್ತೇ ? ಒರಾ್ಯಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್,ಸೌದಿ ಅರೇಬಿಯಾದ ರಾಜಕುಮಾರ್ ಅಲ್ವಲೀದ್ ಬಿನ್ ತಲಾಲ್ ಅವರೂ ಎಲಾನ್ ಮಸ್ಕ್ ಜೊತೆಗಿದ್ದಾರೆ.
ಇವರಷ್ಟೇ ಅಲ್ಲ, ಈಗಾಗಲೇ ಎಲಾನ್ ಮಸ್ಕ್ ತಮ್ಮ ಷೇರು ಮಾರಾಟ ಮಾಡಲಿರೋ 18 ಹೂಡಿಕೆದಾರರ ಪಟ್ಟಿಯನ್ನ ತಯಾರು ಮಾಡಿದ್ದಾರೆ. ಅದರಲ್ಲಿ ಸೌದಿ ಅರೇಬಿಯಾದ ರಾಜಕುಮಾರ್ ಅಲ್ವಲೀದ್ ಬಿನ್ ತಲಾಲ್ 3.5 ಕೋಟಿ ಷೇರುಗಳನ್ನ ಮಾತ್ರ ಟ್ವಿಟರ್ ಗಾಗಿ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಉಳಿದಂತೆ ಇದೇ ವರ್ಷ ಟ್ವಿಟರ್ ಖರೀದಿಯ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
PublicNext
06/05/2022 12:06 pm