ವಿಶ್ವದ ನಂ. ಒನ್ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಕೊನೆಗೂ ಸಾಮಾಜಿಕ ಜಾಲತಾಣ 'ಟ್ವಿಟರ್' ಖರೀದಿಸಿದ್ದಾರೆ.ಟ್ವಿಟರ್ ಖರೀದಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದ ಎಲಾನ್ ಮಸ್ಕ್, ಬರೋಬ್ಬರಿ 3.48 ಲಕ್ಷ ಕೋಟಿ ರೂಪಾಯಿಗಳಿಗೆ ಟ್ವಿಟ್ಟರ್ ಖರೀದಿಸುತ್ತಿದ್ದು, ಇದಕ್ಕೆ ಕಂಪನಿಯ ಆಡಳಿತ ಮಂಡಳಿ ಸಮ್ಮತಿ ನೀಡಿದೆ ಎನ್ನಲಾಗಿದೆ.
ಇನ್ನು ಷೇರುಪೇಟೆ ಕಂಪನಿಯೊಂದರ ಅತೀ ದೊಡ್ಡ ಖರೀದಿ ಇದಾಗಿದೆ. ವೈಯಕ್ತಿಕ ಷೇರುದಾರರಿಂದ ಷೇರುಗಳನ್ನು ಖರೀದಿಸಿ ಎಲಾನ್ ಮಸ್ಕ್ ಹಿಡಿತ ಸಾಧಿಸಬಹುದೆಂಬ ಕಾರಣಕ್ಕೆ ಟ್ವಿಟರ್ ಆಡಳಿತ ಮಂಡಳಿ ತನ್ನ ನಿಯಮಗಳಲ್ಲಿ ಬದಲಾವಣೆಯನ್ನೂ ಮಾಡಿತ್ತು. ಆದರೆ ಅಂತಿಮವಾಗಿ 3.48 ಲಕ್ಷ ಕೋಟಿ ರೂಪಾಯಿಗಳಿಗೆ ಡೀಲ್ ಕುದುರಿದೆ ಎಂದು ಹೇಳಲಾಗಿದೆ.
ಈಗಾಗಲೇ ಅಂತಿಮ ಮಾತುಕತೆ ನಡೆದಿದ್ದು, ಒಪ್ಪಂದದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
PublicNext
26/04/2022 08:57 am