ಹೈದ್ರಾಬಾದ್: ಮೋಟಾರ್ ಕ್ಷೇತ್ರದಲ್ಲಿ ಭಾರೀ ಪ್ರಯೋಗಳೇ ಆಗುತ್ತಿವೆ. ಪೆಟ್ರೋಲ್-ಡೀಸೆಲ್ ಬದಲು, ಎಲೆಕ್ಟ್ರಿಕ್ ಬೈಕ್ ಗಳೂ ಮಾರುಕಟ್ಟೆಗೆ ಬಂದು ಹೆಚ್ಚು ಗಮನ ಸೆಳೆಯುತ್ತಿದೆ.ಅದರಂತೆ ಈಗ ಎಲೆಕ್ಟ್ರಿಕ್ ಟಿಪ್ಪರ್ ಕೂಡ ಅಭಿವೃದ್ಧಿ ಪಡಿಸಲಾಗಿದ್ದು ಶೀಘ್ರದಲ್ಲಿಯೇ 'ಇ ಟ್ರಕ್' ಭಾರತೀಯ ರೋಡ್ ಗಳಲ್ಲೂ ಓಡಾಡೋಕೆ ಆರಂಭಿಸಲಿದೆ.
ಭಾರತದ ಅತಿ ದೊಡ್ಡ ಬಸ್ ತಯಾರಿಕಾ ಕಂಪನಿ ಎಲೆಕ್ಟ್ರಾ ಈಗ 'ಇ ಟ್ರಕ್' ಅಭಿವೃದ್ಧಿಪಡಿಸಿದೆ.ಈಗಾಗಲೇ ಈ ಟಿಪ್ಪರ್ ಗಳ ಪರೀಕ್ಷೆ ಕೂಡ ಆರಂಭಗೊಂಡಿದೆ. ಕೈಗೆಟುಕುವ ದರದಲ್ಲಿಯೇ ಲಭ್ಯವಾಗಲಿದೆ. ಸರಕು-ಸಾಗಿಸಲು ಅನುಕೂಲಕರ ಅಂತಲೇ ತಜ್ಞರು ಹೇಳಿದ್ದಾರೆ.
ಎಲೆಕ್ಟ್ರಿಕ್ ಬಸ್ ತಯಾರಿಕೆಯಲ್ಲಿ ಪರಿಣಿತಿ ಹೊಂದಿರೋ ಎಲೆಕ್ಟ್ರಾ ಈಗ 'ಇ ಟ್ರಕ್' ತಯಾರಿಕೆಗೆ ಪ್ರವೇಶಿಸಿದೆ. ಅದರಂತೆ ಈ ಕಂಪನಿಯ ಇ ಟಿಪ್ಪರ್ ರೆಡಿ ಮಾಡಿದೆ. ಇದು ಅಂತರ್ನಿಮಿತ ಹೆವಿ-ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್‌ಆಗಿದೆ. ಇದರ ವ್ಯಾಪ್ತಿ ಒಂದೇ ಚಾರ್ಜ್ ಗೆ 220 ಕಿಲೋಮೀಟರ್‌ಗಳಷ್ಟು ದೊಡ್ಡದಾಗಿದೆ ಎಂದು ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್ ಹೇಳಿದ್ದಾರೆ.
PublicNext
16/04/2022 07:33 pm