ನವದೆಹಲಿ: ರಷ್ಯಾದಿಂದ ಈಗ 20 ಲಕ್ಷ ಯೂರಲ್ಸ್ ಕಚ್ಚಾ ತೈಲವನ್ನ ಖರೀದಿಸಲಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಈ ಒಂದು ಕೆಲಸ ಮಾಡಿದೆ.
ಇದೇ ಮೇ ತಿಂಗಳಲ್ಲಿಯೇ ಕಚ್ಚಾ ತೈಲ ರಷ್ಯಾದಿಂದ ಭಾರತಕ್ಕೆ ಸಾಗಣೆ ಆಗುತ್ತಿದೆ ಎಂದು ಮೂಲಗಳು ಹೇಳಿವೆ. ಇನ್ನು ಉಕ್ರೇನ್ ಮೇಲೆ ರಷ್ಯಾ ದಾಳಿ ನಡಿಸಿದ ಬಳಿಕ ಭಾರತದ ತೈಲ ಸಂಸ್ಕರಣಾ ಕಂಪನಿಗಳು ಕಚ್ಚಾ ತೈಲ ಖರೀದಿಸುತ್ತಿವೆ.
ಭಾರತವು ಫೆಬ್ರವರಿ 24ರ ನಂತರ ರಷ್ಯಾದಿಂದ ಒಟ್ಟು ಇಲ್ಲಿವರೆಗೂ 1.60 ಕೋಟಿ ಬ್ಯಾರೆಲ್ ತೈಲ ಖರೀದಿಸಲಾಗಿದೆ. ರಷ್ಯಾ ಜೊತೆಗೆ ಆರ್ಥಿಕ ವ್ಯವಹಾರ ಸ್ಥಿರಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
PublicNext
06/04/2022 08:09 pm