ನವದೆಹಲಿ:ಎಚ್‌ಡಿಎಫ್‌ಸಿ ಬ್ಯಾಂಕ್ ಜೊತೆಗೆ ಅತಿ ದೊಡ್ಡ ಹೌಸಿಂಗ್ ಎಚ್‌ಡಿಎಫ್‌ಸಿ ಲಿಮಿಟೆಡ್ ವಿಲೀನ್ ಆಗುತ್ತಿದೆ. ಈ ಒಂದು ಸುದ್ದಿ ಅಧಿಕೃತವಾಗಿ ಹೊರ ಬೀಳುತ್ತಿದ್ದಂತೇನೆ ಷೇರುಗಳ ಬೆಲೆ ಶೇಕಡ 10 ರಷ್ಟು ಏರಿಕೆ ಆಗಿದೆ.
ಎಚ್‌ಡಿಎಫ್‌ಸಿ ಲಿಮಿಡೆಟ್ ಷೇರು 2,636 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು 1,630 ತಲುಪಿದೆ. ಈ ಒಂದು ವಿಲೀನ ಪ್ರಕ್ರಿಯೆಯಿಂದ ಎಚ್‌ಡಿಎಫ್‌ಸಿ ಲಿಮಿಟೆಡ್‌ನ 25 ಷೇರು ಹೊಂದಿದ ಹೂಡಿಕೆದಾರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳ ಕೂಡ ಜಮೆ ಆಗಲಿವೆ.
ಎಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ ಒಟ್ಟು ಆಸ್ತಿ ಮೌಲ್ಯ 6.23 ಲಕ್ಷ ಕೋಟಿ ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್ ನ ಒಟ್ಟು ಆಸ್ತಿ ಮೌಲ್ಯ 19.38 ಕೋಟಿ ಇದೆ.
PublicNext
04/04/2022 02:59 pm