ದೆಹಲಿ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾರ್ಚ್ ತಿಂಗಳಿನಲ್ಲಿ ಹೆಚ್ಚಾದ ಬೆಲೆ ಏರಿಕೆ ಓಟ ಇನ್ನು ನಿಂತಿಲ್ಲ.
ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಲಾ 80 ಪೈಸೆ ಹೆಚ್ಚಿಸಲಾಗಿದೆ. ಕಳೆದ 10 ದಿನದಲ್ಲಿ 9ನೇ ಬಾರಿಗೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ ಸರಾಸರಿ ₹ 6.40 ಹೆಚ್ಚಾಗಿದೆ. ಮಾರ್ಚ್ 22 ರಿಂದ ಆರಂಭವಾದ ಇಂಧನ ದರ ಏರಿಕೆ ಬಿಸಿಗೆ ಮಾ. 24 ಒಂದು ದಿನ ಮಾತ್ರ ವಿರಾಮ ನೀಡಲಾಗಿತ್ತು. ಇದೀಗ ಪ್ರತಿದಿನ ಬೆಲೆ ಏರಿಕೆ ಮಾಡಲಾಗುತ್ತಿದೆ.
ಇಂದಿನ ದರ ಹೀಗಿದೆ.
ಬೆಂಗಳೂರು
ಪೆಟ್ರೋಲ್: ಪ್ರತಿ ಲೀಟರ್ ಗೆ 107.26 ರೂಪಾಯಿ
ಡೀಸೆಲ್: ಪ್ರತಿ ಲಿ. ಗೆ 91.29 ರೂಪಾಯಿ
ದೆಹಲಿ
ಪೆಟ್ರೋಲ್: 101.81 ರೂಪಾಯಿ
ಡೀಸೆಲ್: 99.07
ಮುಂಬೈ
ಪೆಟ್ರೋಲ್: 116.72 ರೂ.
ಡೀಸೆಲ್: 100.94
ಚೆನ್ನೈ
ಪೆಟ್ರೋಲ್: 107.49 ರೂ.
ಡೀಸೆಲ್: 97.56
ಕೊಲ್ಕತ
ಪೆಟ್ರೋಲ್: 111.32 ರೂ.
ಡೀಸೆಲ್: 96.22
ಹೈದರಾಬಾದ್
ಪೆಟ್ರೋಲ್: 115.32 ರೂ.
ಡೀಸೆಲ್: 101.51
ಒಟ್ಟಿನಲ್ಲಿ ತೈಲ ದರ ಏರಿಕೆಯಿಂದ ಜನಸಾಮಾನ್ಯರ ಬದುಕು ಭಾರವಾಗಿದೆ.
PublicNext
31/03/2022 09:18 am