ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ- ಬಿಎಸ್​ಇ ಸೆನ್ಸೆಕ್ಸ್​​ನಲ್ಲಿ 697 ಪಾಯಿಂಟ್​ ಏರಿಕೆ, 17 ಸಾವಿರ ದಾಟಿದ ನಿಫ್ಟಿ

ಮುಂಬೈ: ಮುಂಬೈ ಷೇರು ಮಾರುಕಟ್ಟೆಯ ವಹಿವಾಟು 697 ಪಾಯಿಂಟ್‌ಗಳ ಏರಿಕೆಯೊಂದಿಗೆ ಕೊನೆಗೊಂಡಿದೆ. 30 ಕಂಪನಿಗಳ ಎಸ್‌ಆ್ಯಂಡ್ ಪಿ ಬಿಎಸ್‌ಇ ಸೆನ್ಸೆಕ್ಸ್ 696.81 ಪಾಯಿಂಟ್‌ಗಳ ಹೆಚ್ಚಳದೊಂದಿಗೆ 57,989.30 ಪಾಯಿಂಟ್‌ಗಳಿಗೆ ತಲುಪಿದೆ. ಈ ದಿನದ ವಹಿವಾಟಿನಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್, ಟಿಸಿಎಸ್​, ಐಟಿಸಿ ಮುಂತಾದ ಕಂಪನಿಗಳ ಪ್ರಭಾವ ಹೆಚ್ಚಾಗಿತ್ತು.

ರಾಷ್ಟ್ರೀಯ ಷೇರು ವಿನಿಮಯದ ನಿಫ್ಟಿ-50 197.90 ಪಾಯಿಂಟ್ ಅಥವಾ 1.16 ಶೇಕಡಾ ಏರಿಕೆಯಾಗಿದೆ. ಈ ಮೂಲಕ ಹಿಂದಿನ ದಿನಕ್ಕೆ ಮುಕ್ತಾಯವಾಗಿದ್ದ 17,117.60 ಪಾಯಿಂಟ್‌ಗಳಿಂದ 17,315.50 ಪಾಯಿಂಟ್‌ಗಳಿಗೆ ಏರಿತು. ನಿಫ್ಟಿ ಸೋಮವಾರ 169.45 ಪಾಯಿಂಟ್ ಅಥವಾ ಶೇ.0.98ರಷ್ಟು ಇಳಿಕೆ ಕಂಡಿತ್ತು.

Edited By : Vijay Kumar
PublicNext

PublicNext

22/03/2022 06:48 pm

Cinque Terre

83.86 K

Cinque Terre

0

ಸಂಬಂಧಿತ ಸುದ್ದಿ