ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ- ಸೆನ್ಸೆಕ್ಸ್‌ 1,047 ಅಂಕ ಜಿಗಿತ

ಮುಂಬೈ: ಅಮೆರಿಕದ ಫೆಡ್‌ನ ಮೃದು ಧೋರಣೆ, ಉಕ್ರೇನ್-ರಷ್ಯಾ ಕದನ ವಿರಾಮದ ಸುಳಿವು ಮತ್ತು ಚೀನಾ ಆರ್ಥಿಕ ಕೊಡುಗೆಗಳನ್ನು ಪ್ರಕಟಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಾಗತಿಕ ಇಕ್ವಿಟಿ ಮಾರುಕಟ್ಟೆಗಳು ಭಾರೀ ಗಳಿಕೆ ದಾಖಲಿಸಿವೆ.

ಮೂರು ವರ್ಷಗಳಲ್ಲಿ ಅಮೆರಿಕನ್ ಫೆಡರಲ್ ರಿಸರ್ವ್‌ನ ಮೊದಲ ಬಡ್ಡಿದರ ಹೆಚ್ಚಳದ ಒಂದು ದಿನದ ನಂತರ, ಜಾಗತಿಕ ಮಾರುಕಟ್ಟೆಗಳಲ್ಲಿನ ಲಾಭದ ನಂತರ ಸೆನ್ಸೆಕ್ಸ್ ಗುರುವಾರ 1,047 ಅಂಕಗಳನ್ನು ಜಿಗಿದು 57,864ಕ್ಕೆ ತಲುಪಿದೆ. ಇನ್ನು ನಿಫ್ಟಿ 50 ಸೂಚ್ಯಂಕ 312 ಅಂಕ ಜಿಗಿದು 17,287ಕ್ಕೆ ತಲುಪಿದೆ. ಎಚ್‌ಡಿಎಫ್‌ಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗರಿಷ್ಠ ಗಳಿಕೆ ದಾಖಲಿಸಿರುವ ಷೇರುಗಳಾಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಒಂದು ವರ್ಷದಲ್ಲಿ ತಮ್ಮ ಅತ್ಯುತ್ತಮ ವಾರವನ್ನು ದಾಖಲಿಸಿವೆ.

Edited By : Vijay Kumar
PublicNext

PublicNext

17/03/2022 04:48 pm

Cinque Terre

13.94 K

Cinque Terre

0