ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿಗೆ 2ನೇ ಸ್ಥಾನ

ನವದೆಹಲಿ:2022ರ ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ ಜಾಗತಿಕ ಶ್ರೀಮಂತರಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿಗೆ 2ನೇ ಸ್ಥಾನ ದೊರೆತಿದೆ. ಅದಾನಿ ಎಂಟರ್‌ಪ್ರೈಸಸ್ ಮಾಲೀಕ ಗೌತಮ್ ಅದಾನಿಯವರದ್ದು ನಿವ್ವಳ ಆದಾಯ $49 ಬಿಲಿಯನ್. ಅದಾನಿ ಗ್ರೂಪ್ ಅಧ್ಯಕ್ಷರು ಕಳೆದ ವರ್ಷದಲ್ಲಿ ಪ್ರತಿ ವಾರ 6,000 ಕೋಟಿ ರೂಪಾಯಿಗಳನ್ನು ಸೇರಿಸಿದ್ದಾರೆ ಎಂದು ಹುರೂನ್ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಐದು ವರ್ಷಗಳಲ್ಲಿ 86 ರ‍್ಯಾಂಕ್‌ಗಳನ್ನು ಸುಧಾರಿಸಿರುವ ಗೌತಮ್ ಅದಾನಿ ಅವರು 2022 M3M ಹುರೂನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಶ್ರೀಮಂತ ಇಂಧನ ಉದ್ಯಮಿಯಾಗಿದ್ದಾರೆ. ಅವರ ಸಂಪತ್ತು 153 ಪ್ರತಿಶತದಷ್ಟು ಜಿಗಿದಿದೆ ಎಂದು ಹುರೂನ್ ಇಂಡಿಯಾ ಸಂಸ್ಥೆ ತಿಳಿಸಿದೆ. ಕಳೆದ ವರ್ಷ ಅವರ ಸಂಪತ್ತಿಗೆ $49 ಬಿಲಿಯನ್ ಸೇರಿಸಿದ್ದಾರೆ. ನವೀಕರಿಸಬಹುದಾದ ಇಂಧನ ಕಂಪನಿ ಅದಾನಿ ಗ್ರೀನ್‌ನ ನಂತರ, ಗೌತಮ್ ಅದಾನಿ ಅವರ ಸಂಪತ್ತು 2020 ರಲ್ಲಿ $ 17 ಶತಕೋಟಿಯಿಂದ $ 81 ಶತಕೋಟಿಗೆ ಸುಮಾರು ಐದು ಪಟ್ಟು ಹೆಚ್ಚಾಗಿದೆ, ”ಎಂದು ಅದು ಸಂಸ್ಥೆ ತಿಳಿಸಿದೆ.

Edited By : Nagaraj Tulugeri
PublicNext

PublicNext

16/03/2022 06:18 pm

Cinque Terre

81.91 K

Cinque Terre

6

ಸಂಬಂಧಿತ ಸುದ್ದಿ