ಬೆಂಗಳೂರು: ಕೋವಿಡ್ ಸೋಂಕು ಕಡಿಮೆ ಆಗಿದೆ. ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳ ಈ ಅವಕಾಶವನ್ನ ಸ್ಥಗಿತಗೊಳಿಸಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.
ಡಿಎಚ್ ಬೆಂಗಳೂರು 2040 ಶೃಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಮನೆಯಿಂದ ಉದ್ಯೋಗಿಗಳು ಕೆಲಸ ಮಾಡುವ ಆ ಸ್ವರೂಪವನ್ನು ಈಗ ಸಂಪೂರ್ಣ ಬದಲಾಯಿಸಬೇಕಿದೆ ಅಂತಲೇ ಹೇಳಿಕೊಂಡಿದ್ದಾರೆ.
ಮನೆಯಿಂದ ಕೆಲಸ ಮಾಡುವುದು ನನಗೆ ಇಷ್ಟವೇ ಇಲ್ಲ. ಇದರಿಂದ ಕೆಲಸ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಸೃಜನಶೀಲತೆ ಅಂತೂ ಸಾಧ್ಯವೇ ಇಲ್ಲ ಅಂತಲೇ ವಿವರಿಸಿದ್ದಾರೆ ನಾರಾಯಣಮೂರ್ತಿ.
PublicNext
12/03/2022 10:38 am