ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಚ್ಚಾ ತೈಲ ದರ ಬ್ಯಾರೆಲ್‌ಗೆ 118 ಡಾಲರ್‌; 9 ವರ್ಷಗಳ ಗರಿಷ್ಠ ಮಟ್ಟ!

ಸಿಂಗಪುರ: ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಗುರುವಾರವೂ ಸಹ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ದರವು 1 ಬ್ಯಾರಲ್‌ಗೆ 118 ಡಾಲರ್‌ (8,956 ರೂ.) ದಾಟಿದೆ. ಇದು 2013ರ ಆಗಸ್ಟ್‌ ನಂತರ ಕಂಡ ಅತ್ಯಧಿಕ ಬೆಲೆ ಏರಿಕೆಯಾಗಿದೆ.

ಹಲವು ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಕಾರಣದಿಂದಾಗಿ ರಷ್ಯಾದಿಂದ ಕಚ್ಚಾ ತೈಲ ಸಾಗಣೆ ಮತ್ತು ವಹಿವಾಟಿಗೆ ಅಡ್ಡಿಯಾಗಿದೆ. ಇದರ ಬೆನ್ನಲ್ಲೇ ಅಮೆರಿಕದ ಕಚ್ಚಾ ತೈಲ ಸಂಗ್ರಹದಲ್ಲಿ ಭಾರೀ ಇಳಿಕೆಯಾಗಿದೆ. 2013ರ ಆಗಸ್ಟ್‌ ನಂತರ ಇದೇ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲದ ಫ್ಯೂಚರ್ಸ್‌ ಬೆಲೆ ಪ್ರತಿ ಬ್ಯಾರೆಲ್‌ಗೆ 118.12 ಡಾಲರ್‌ ತಲುಪಿದೆ. ಅಮೆರಿಕದ ವೆಸ್ಟ್‌ ಟೆಕ್ಸಸ್ ಇಂಟರ್‌ಮಿಡಿಯೇಟ್‌ (ಡಬ್ಲ್ಯುಟಿಎಸ್‌) ದರ್ಜೆಯ ಕಚ್ಚಾ ತೈಲ ದರ ಬ್ಯಾರೆಲ್‌ಗೆ 2.41 ಡಾಲರ್‌ ಏರಿಕೆಯಾಗಿ 113.01 ಡಾಲರ್‌ ಮುಟ್ಟಿದೆ. ಇದು ಕಳೆದ 11 ವರ್ಷಗಳಲ್ಲಿ ದಾಖಲಾಗಿರುವ ಅತ್ಯಧಿಕ ದರವಾಗಿದೆ.

ತೈಲ ರಫ್ತು ದೇಶಗಳ ಒಕ್ಕೂಟ (ಒಪೆಕ್‌) ಹೊರತುಪಡಿಸಿ, ವಿಶ್ವದಲ್ಲಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ಎರಡನೇ ದೊಡ್ಡ ದೇಶ ರಷ್ಯಾ. ರಷ್ಯಾವನ್ನು ಒಪೆಕ್‌ ಪ್ಲಸ್‌ ದೇಶ ಎಂದು ಪರಿಗಣಿಸಲಾಗಿದೆ. ರಷ್ಯಾದಿಂದ ಬಿಕರಿಯಾಗುವ ಕಚ್ಚಾ ತೈಲವನ್ನು ಬ್ರೆಂಟ್ ಕಚ್ಚಾ ತೈಲ ಎಂದು ವರ್ಗೀಕರಿಸಲಾಗಿದೆ. ಉಕ್ರೇನ್‌ ಬಿಕ್ಕಟ್ಟನ್ನು ಪರಿಗಣಿಸದೆ ಮಾರ್ಚ್‌ನಿಂದ ಕಚ್ಚಾ ತೈಲ ಉತ್ಪಾದನೆಯನ್ನು ನಿತ್ಯ 4,00,000 ಬ್ಯಾರೆಲ್‌ಗಳಿಗೆ ಹೆಚ್ಚಿಸುವುದನ್ನು ಮುಂದುವರಿಸಲು ಒಪೆಕ್ ರಾಷ್ಟ್ರಗಳು ಇತ್ತೀಚೆಗೆ ನಿರ್ಧರಿಸಿದ್ದವು.

Edited By : Vijay Kumar
PublicNext

PublicNext

03/03/2022 03:15 pm

Cinque Terre

42.6 K

Cinque Terre

1

ಸಂಬಂಧಿತ ಸುದ್ದಿ