ಚಂಡೀಗಢ : ಹೈನುಗಾರಿಕೆ ಮಾಡಲು ಉತ್ತಮ ತಳಿಯ ದನ,ಕರುಗಳು ಸಿಗುವುದು ಅತೀ ಮುಖ್ಯವಾಗುತ್ತದೆ. ಒಳ್ಳೆಯ ಹೈನುಗಾರಿಕೆ ಮಾಡಲು ಮುರ್ರಾ ತಳಿ ಎಮ್ಮೆ ಉತ್ತಮ. ಹೌದು ಮುರ್ರಾ ತಳಿಯ ಎಮ್ಮೆ ದಿನಕ್ಕೆ ಸುಮಾರು 33.8 ಲೀಟರ್ ನಷ್ಟು ಹಾಲು ಕೊಡುವ ಮೂಲಕವಾಗಿ ಸುದ್ದಿಯಾಗಿದೆ.
ಹರಿಯಾಣದಲ್ಲಿ ಕೈತಾಲ್ ನ ಬುಧಖೇಡ ನಿವಾಸಿ ನರೇಶ್ ಅವರು ಮುರ್ರಾ ತಳಿಯ ಎಮ್ಮೆಯನ್ನು ಸಾಕಿದ್ದಾರೆ. ಈ ಎಮ್ಮೆ 33.8 ಲೀಟರ್ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದೆ. ಹೀಗಾಗಿ ಈ ಎಮ್ಮೆಗೆ ಭಾರೀ ಬೇಡಿಕೆ ಇದೆ.
ಮುರ್ರಾ ಎಮ್ಮೆಗಳು ಕರು ಹಾಕಿದ ಎಂಟು ತಿಂಗಳುಗಳವರೆಗೆ ಹಾಲು ಕೊಡುತ್ತವೆ. ಈ ಎಮ್ಮೆಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್ ಡಿಬಿಬಿ) 33.8 ಲೀಟರ್ ಹಾಲು ನೀಡುವ ದಾಖಲೆಯ ಪ್ರಮಾಣ ಪತ್ರದೊಂದಿಗೆ ಸುಧಾರಿತ ತಳಿ ಸ್ಥಾನಮಾನವನ್ನು ನೀಡಿದೆ.
PublicNext
02/03/2022 12:23 pm