ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BMW ಮಿನಿ ಕೂಪರ್ ಎಸ್‌ಇ ರಿಲೀಸ್: ಇದು ವಿದ್ಯುತ್ ಚಾಲಿತ ಐಷಾರಾಮಿ ಕಾರು

ಬೆಂಗಳೂರು: ಐಷಾರಾಮಿ ಕಾರುಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಬಿಎಮ್‌ಡಬ್ಲ್ಯೂ ಕಂಪನಿಯು ಮತ್ತೊಂದು ಐಷಾರಾಮಿ ಹಾಗೂ ಫ್ಯಾನ್ಸಿ ಲುಕ್ ಇರುವ ಕಾರನ್ನು ಪರಿಚಯಿಸಿದೆ.

ಈ ಮೂಲಕ ಭಾರತದಲ್ಲಿ ಬಿಎಮ್‌ಡಬ್ಲ್ಯೂ ಕಂಪನಿಯು ತನ್ನ ಹತ್ತನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ‌. ಮೂರು ಬಾಗಿಲುಗಳ ಈ ಕಾರಿನ ಆರಂಭಿಕ ಬೆಲೆ ₹47.2 ಲಕ್ಷದವರೆಗೆ ಇದೆ.

ಇನ್ನು ಈ ಕಾರಿನ ವೈಶಿಷ್ಟ್ಯತೆ ಎಂದರೆ 7.3 ಸೆಕೆಂಡ್‌ಗಳಲ್ಲಿ ಈ ಕಾರು ಪ್ರತಿ ಗಂಟೆಗೆ 100 ಕಿಮೀ ವೇಗ ತಲುಪಲಿದೆ ಎಂದು ಕಂಪನಿ ಹೇಳಿದೆ. 32.6 ಕಿಲೋ ಬ್ಯಾಟರಿ ತೂಕವನ್ನು ಇದು ಹೊಂದಿದೆ. ಮಲ್ಟಿ ಫಂಕ್ಷನಲ್ ಡಿಸ್‌ಪ್ಲೇ, ಕ್ರ್ಯಾಷ್ ಸೆನ್ಸರ್, ಆ್ಯಂಟಿ ಲಾಕ್ ಬ್ರೇಕಿಂಗ್ ಸೇರಿದಂತೆ ಹಲವಾರು ಅಡ್ವಾನ್ಸ್ ಟೆಕ್ನಾಲಜಿಯನ್ನು ಈ ಕಾರು ಹೊಂದಿದೆ.

Edited By : Nagaraj Tulugeri
PublicNext

PublicNext

24/02/2022 11:00 pm

Cinque Terre

36.73 K

Cinque Terre

1

ಸಂಬಂಧಿತ ಸುದ್ದಿ