ಮುಂಬೈ: ರಷ್ಯಾ ಮತ್ತು ಉಕ್ರೇನ್ ದೇಶದಲ್ಲಿ ಯುದ್ಧ ಘೋಷಣೆ ಆಗಿದ್ದೇ ತಡ ಷೇರು-ಮಾರುಕಟ್ಟೆಯಲ್ಲಿ ಎಲ್ಲವೂ ಏರು ಪೇರಾಗಿದೆ. ನಿಫ್ಟಿ ಸೂಚ್ಯಂಕ ಕುಸಿದು ಹೋಗಿದೆ. ಷೇರು ಮಾರುಕಟ್ಟೆ ಸೂಚ್ಯಂಕ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ ಬಿಡಿ.
ಬುಧವಾರದ ಸೂಚ್ಯಂಕ ದಿನದ ಆರಂಭದಲ್ಲಿ 300 ರಷ್ಟು ಏರಿಕೆ ಕಂಡಿದ್ದರೂ ದಿನದ ಅಂತ್ಯದಲ್ಲಿ ಇದು 68.62 ಪಾಯಿಂಟ್ಸ್ ಗೆ ಕೊನೆಗೊಂಡು 57,232,.06 ಸ್ಥಿರವಾಗಿತ್ತು.
ನಿಫ್ಟಿ ಸೂಚ್ಯಂಕ ಕೂಡ ಇಳಿಕೆ ಕಂಡಿದೆ.ದಿನದ ಆರಂಭದಲ್ಲಿ 28.95ಕ್ಕೆ ಇಳಿಕೆ ಕಂಡು 17,063,25ಕ್ಕೆ ಎಂಡ್ ಆಗಿದೆ.
ಇಂದು 10.45 ನಿಮಿಷದ ಪ್ರಕಾರ, ಸೆನ್ಸಕ್ಸ್ 1,646 ರಷ್ಟು ಅಂಕ ಕುಸಿದಿದ್ದರೇ, ನಿಫ್ಟಿ 479 ರಷ್ಟು ಅಂಕ ಕುಸಿತ ಕಂಡಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರೋದ್ರಿಂದ ದೇಶದ ಷೇರು ಮಾರುಕಟ್ಟೆ ಮೇಲೆ ಇನ್ನೂ ಭಾರಿ ಪರಿಣಾಮ ಬೀರೋ ಸಾಧ್ಯತೆ ಇದೆ.
PublicNext
24/02/2022 10:51 am